ಕರಿಕೆ, ಫೆ. 6: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಕಡುಬಡವರಿಗೆ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಸರಬರಾಜಾದ ತೊಗರಿಬೇಳೆ ಪ್ಯಾಕೆಟ್‍ನಲ್ಲಿ ಸತ್ತು ಒಣಗಿದ ಇಲಿಯೊಂದು ಪತ್ತೆಯಾಗಿದೆ. ಕರಿಕೆ ಗ್ರಾಮದ ಎಳ್ಳುಕೊಚ್ಚಿ ಮಡೆಕಾನ ನಿವಾಸಿ ಗಣೇಶ ಎಂಬವರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಇದರ ಅನ್ವಯ ಜನವರಿ ತಿಂಗಳ ಪಡಿತರವನ್ನು ನ್ಯಾಯಬೆಲೆ ಅಂಗಡಿಯಿಂದ ಪಡೆದು ಮನೆಯಲ್ಲಿ ಪ್ಯಾಕೆಟ್ ಒಡೆದಾಗ ಸತ್ತು ಒಣಗಿದ ಇಲಿಯೊಂದು ಸಿಕ್ಕಿದೆ. ಬಡವರಿಗಾಗಿ ಸರಕಾರ ಕಡಿಮೆ ದರದಲ್ಲಿ ನೀಡುತ್ತಿರುವ ಬೇಳೆಯಲ್ಲಿ ಇಲಿ ದೊರೆತಿರುವದು ಅನ್ಯಭಾಗ್ಯದೊಂದಿಗೆ ‘ಇಲಿ ಭಾಗ್ಯ’ ದೊರೆತಿರುವದು ಬಡವರ ಬಗೆಗಿನ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. - ಹೊದ್ದೆಟ್ಟಿ ಸುಧೀರ್