ಗೋಣಿಕೊಪ್ಪ ವರದಿ, ಫೆ. 6: ಆಂಧ್ರ ಪ್ರದೇಶದ ಗುಂಟೂರುವಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಮಾಸ್ಟರ್ಸ್ ಟೂರ್ನಿಯ 2ನೇ ದಿನ ಕೊಡಗಿಗೆ 2 ಚಿನ್ನ ಲಭಿಸಿದೆ. 70 ವಯೋಮಾನದ ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಮಾರಮಾಡ ಮಾಚಮ್ಮ ಅವರಿಗೆ ಪ್ರಥಮ ಸ್ಥಾನದ ಮೂಲಕ ಚಿನ್ನ, 35 ಮೇಲ್ಪಟ್ಟ ವಯೋಮಾನದ ಮಹಿಳೆಯರ 400 ಮೀ. ಓಟದಲ್ಲಿ ಬೊಪ್ಪಂಡ ಕುಸುಮ ಭೀಮಯ್ಯ ಪ್ರಥಮ ಸ್ಥಾನದ ಮೂಲಕ ಚಿನ್ನ ಗೆದ್ದಿದ್ದಾರೆ. ಇದರಿಂದಾಗಿ ಕೊಡಗಿಗೆ 3 ಚಿನ್ನ ಲಭಿಸಿದಂತಾಗಿದೆ.