ಗೋಣಿಕೊಪ್ಪಲು, ಫೆ. 5: ಗ್ರಾಮೀಣ ಪ್ರದೇಶದ ದಿನಸಿ ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಆಗಿಂದಾಗ್ಗೆ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಇಂತಹ ದಂದೆ ನಡೆಸುತ್ತಿರುವವರ ನಿಖರ ಮಾಹಿತಿ ಸಂಗ್ರಹಿಸಿದ ಗೋಣಿಕೊಪ್ಪ ಪೊಲೀಸರು ಗಾಂಧಿ ಎಂಬಾತನನ್ನು ಬಂಧಿಸುವ ಮೂಲಕ 90 ಎಂಎಲ್‍ನ 95 ಟೆಟ್ರಾಪ್ಯಾಕ್ ಅನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನ್ನ ಡಿಯೋ ಮೊಪೇಡ್ ಬೈಕ್‍ನಲ್ಲಿ ಗಾಂಧಿ ಹಲವು ಸಮಯದಿಂದ ಅಕ್ರಮ ಮದ್ಯವನ್ನು ದುಪ್ಪಟ್ಟು ದರಕ್ಕೆ ಮಾರುತ್ತಿದ್ದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿಯ ಮೇರೆ ಪೊಲೀಸರು ಈತನ ಚಲನ ವಲನ ಗಮನಿಸಿ ಸಂಜೆ ವೇಳೆಯಲ್ಲಿ ಕಾರ್ಮಿಕÀರು ತಮ್ಮ ಕೆಲಸ ಮುಗಿಸಿ ವಾಪಸ್ಸು ಮನೆಗೆ ತೆರಳುತ್ತಿದ್ದ ಸಂದರ್ಭ ಗಾಂಧಿ ಅತ್ತೂರು ಗ್ರಾಮದ ತಿಲಕ್ ತಿಮ್ಮಯ್ಯವರ ಲೈನ್ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ.
ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ತಂಡ ಧಾಳಿ ನಡೆಸುವ ಮೂಲಕ 95 ಪ್ಯಾಕೆಟ್ ಅಕ್ರಮ ಮದ್ಯ ಹಾಗೂ ಡಿಯೋ ಮೊಪೇಡ್ ಸಹಿತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕೂಲಿ ಕಾರ್ಮಿಕರನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಸಂಜೆಯ ವೇಳೆಯಲ್ಲಿ ಈ ದಂಧೆ ನಡೆÀಸುತ್ತಿರುವ ಬಗ್ಗೆ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ಇದರಿಂದ ಬಂದ ಲಾಭದಿಂದ ಬೈಕ್ ಖರೀದಿಸಿರುವದಾಗಿಯೂ, ಹಲವು 95 ಪ್ಯಾಕೆಟ್ ಅಕ್ರಮ ಮದ್ಯ ಹಾಗೂ ಡಿಯೋ ಮೊಪೇಡ್ ಸಹಿತ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಕೂಲಿ ಕಾರ್ಮಿಕರನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಸಂಜೆಯ ವೇಳೆಯಲ್ಲಿ ಈ ದಂಧೆ ನಡೆÀಸುತ್ತಿರುವ ಬಗ್ಗೆ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ಇದರಿಂದ ಬಂದ ಲಾಭದಿಂದ ಬೈಕ್ ಖರೀದಿಸಿರುವದಾಗಿಯೂ, ಹಲವು ಸಮಯದಿಂದ ಇದನ್ನೆ ವೃತ್ತಿಯಾಗಿಸಿ ಕೊಂಡಿರುವದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಇನ್ನು ಹಲವಷ್ಟು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ವ್ಯಾಪಕ ದೂರುಗಳು ಲಭ್ಯವಾಗಿದ್ದು ಸದ್ಯದಲ್ಲೆ ಇನ್ನಷ್ಟು ಕಡೆಗಳಲ್ಲಿ ಧಾಳಿ ನಡೆಸುವ ಮೂಲಕ ಆರೋಪಿಗಳನ್ನು ಮಾಲು ಸಮೇತ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವದು ಎಂದು ಠಾಣಾಧಿಕಾರಿ ಶ್ರೀಧರ್ ತಿಳಿಸಿದ್ದಾರೆ.
ಅಬಕಾರಿ ಕಾಯ್ದೆ 32,34ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಗಾಂಧಿಯನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯ ಸಂದರ್ಭ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ, ಅನೀಫ್, ಮಂಜುನಾಥ್, ಸುನಿಲ್, ಶಂಕರ್ ಮುಂತಾದವರು ಇದ್ದರು.
-ಹೆಚ್.ಕೆ. ಜಗದೀಶ್