ಮಡಿಕೇರಿ, ಫೆ. 3: ಅಂದಗೋವೆ ಗ್ರಾಮ, 7ನೇ ಹೊಸಕೋಟೆ, ಕಲ್ಲುಕೋರೆಯಲ್ಲಿರುವ ಶ್ರೀ ಭದ್ರಕಾಳಿ ನಾಗದೇವರ ಹಾಗೂ ಪರಿವಾರ ದೇವರುಗಳ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ತಾ. 5 ಹಾಗೂ 6 ರಂದು ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ಬ್ರಹ್ಮಶ್ರೀ ರಾಮಕೃಷ್ಣ ಕಲ್ಲೂರಾಯ ಅವರ ನೇತೃತ್ವದಲ್ಲಿ ನಡೆಯಲಿದ್ದು, ದೇಣಿಗೆಯನ್ನು ನೀಡುವವರು 7ನೇ ಹೊಸಕೋಟೆಯ ಕಾರ್ಪೋರೇಶನ್ ಬ್ಯಾಂಕ್ ಖಾತೆ ಸಂಖ್ಯೆ 520101032440606, IಈSಅ ಛಿoಡಿಠಿ 0002943 ಕ್ಕೆ ಜಮೆ ಮಾಡಬಹುದಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಕೋರಿದೆ.