ಶನಿವಾರಸಂತೆ, ಫೆ. 4: ಯೋಗ ಬಂಧುಗಳು, ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಬೊಜ್ಜು ಹಾಗೂ ಮಧುಮೇಹಕ್ಕಾಗಿ ಉಚಿತ ಯೋಗ ಶಿಬಿರ ಮತ್ತು ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಸ್ಥಳೀಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಉದ್ಘಾಟನೆಯಾಯಿತು.

ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಗಿರೀಶ್ ಶಿಬಿರ ಉದ್ಘಾಟಿಸಿದರರು. ಕಾಫಿ ಬೆಳೆಗಾರ ಎನ್.ವಿ. ಹರೀಶ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶಿಬಿರ ತಾ. 12 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 5.30 ರಿಂದ 7 ರವರೆಗೆ ಯೋಗಭ್ಯಾಸ ನಡೆಯುತ್ತದೆ. ತಾ. 6 ರಂದು ಬೆಳಿಗ್ಗೆ 6.30 ಕ್ಕೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಪ್ರವಚನ ನೀಡುತ್ತಾರೆ. ತಾ. 8 ರಂದು ಮಕ್ಕಳ ತಜ್ಞ ಡಾ. ಆರ್.ವಿ. ಚಿದಾನಂದ್ ಆರೋಗ್ಯ ಮತ್ತು ಆಹಾರದ ಬಗ್ಗೆ ಚಿಂತನಾ ಕಾರ್ಯಕ್ರಮ ನೀಡುತ್ತಾರೆ. ತಾ. 9 ರಂದು ಬೀಟಿಕಟ್ಟೆಯ ಶಿಲ್ಪಕಲಾ ತಜ್ಞ ಮಂಜುನಾಥ್ ಆಚಾರ್ಯ ವಾಸ್ತುಶಿಲ್ಪದ ಬಗ್ಗೆ ಮಾಹಿತಿ ನೀಡುತ್ತಾರೆ. ತಾ. 10 ರಂದು ಬೆಳಿಗ್ಗೆ 5.15 ಕ್ಕೆ ಯೋಗಾಚಾರ್ಯ ಡಾ. ಬಿ.ಪಿ. ಮೂರ್ತಿ ಯೋಗ ಶಿಕ್ಷಣ ನೀಡುತ್ತಾರೆ. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ ಪಾಲ್ಗೊಳ್ಳುತ್ತಾರೆ.