ಮಡಿಕೇರಿ, ಫೆ. 3: ಮಡಿಕೇರಿ ತಾಲೂಕು ಮೀನುಗಾರಿಕೆ ಇಲಾಖೆ ವತಿಯಿಂದ 2018-19ನೇ ಸಾಲಿನ ವಿವಿಧ ಯೋಜನೆಗಳಡಿ ಮೀನು ಕೃಷಿಕರಿಗೆ ಹಾಗೂ ಮೀನುಗಾರರಿಗೆ ಶೇಕಡಾವಾರು ಸಹಾಯಧನದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಮೀನುಗಾರಿಕೆ ಸಲಕರಣೆ ಕಿಟ್ಟು ಮತ್ತು ಫೈಬರ್ ಗ್ಲಾಸ್ ಹರಿಗೋಲನ್ನು ವಿತರಿಸಿದರು.

ರಾಜ್ಯವಲಯ ಯೋಜನೆಯಡಿ ಸಾಮಾನ್ಯ ವರ್ಗದ 3 ಫಲಾನುಭವಿಗಳಿಗೆ ಫೈಬರ್ ಗ್ಲಾಸ್ ಹರಿಗೋಲು, 2 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 4 ಫಲಾನುಭವಿಗಳಿಗೆ ಫೈಬರ್ ಗ್ಲಾಸ್ ಹರಿಗೋಲು ಮತ್ತು ಮೀನುಗಾರಿಕೆ ಸಲಕರಣೆ ಕಿಟ್ಟು, ಜಿಲ್ಲಾ ಪಂಚಾಯಿತಿ ಯೋಜನೆಯಡಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿಯ 7 ಫಲಾನುಭವಿಗಳಿಗೆ ಹಾಗೂ ಪರಿಶಿಷ್ಟ ಪಂಗಡದ 3 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್, ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಪಿ. ಶ್ರೀದೇವಿ ಹಾಗೂ ಇತರರು ಇದ್ದರು.