ಕೂಡಿಗೆ, ಫೆ. 4: ಕಣಿವೆಯಲ್ಲಿ ಆಯೋಜಿಸಿದ್ದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿಚಾರಗೋಷ್ಠಿಯು ನಡೆಯಿತು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಕುಲ್ಲಚಂಡ ಎಸ್. ಪೂವಮ್ಮ ವಹಿಸಿದ್ದರು. ಮಹಿಳೆ ಮತ್ತು ವೃತ್ತಿ ಕೌಶಲ್ಯಗಳು ಎಂಬ ವಿಷಯವನ್ನು ಮಂಡಿಸಿದ ಮಡಿಕೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಮ್ತಾಜ್ ಮಹಿಳೆಯರು ತಮ್ಮ ವೃತ್ತಿ, ಕೆಲಸ ಕಾರ್ಯಗಳಲ್ಲಿ ತಲ್ಲೀನತೆ ಮತ್ತು ಕಠಿಣ ಪರಿಶ್ರಮದಿಂದ ದುಡಿದರೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.ಮಹಿಳೆ ಮತ್ತು ಕೃಷಿ ಕುಟುಂಬಗಳು ಎಂಬ ವಿಷಯವನ್ನು ಮಂಡಿಸಿದ ಶಿಕ್ಷಕಿ ಅಣ್ಣಮ್ಮ, ರೈತ ವರ್ಗದ ಕುಟುಂಬದಲ್ಲಿ ಮಹಿಳೆಯರ ಪಾತ್ರ ಅಪಾರವಾದದ್ದು, ಮಹಿಳೆಯು ತನ್ನಲ್ಲಿ ಎಲ್ಲಾ ಕಷ್ಟಗಳಿದ್ದರೂ ತನ್ನ ಕುಟುಂಬದ ಜವಬ್ದಾರಿಯನ್ನು ಹೊತ್ತು ಸುಗಮವಾಗಿ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಆರ್ಥಿಕವಾಗಿ ಮುಂದುವರೆಯಲು ಕಾರಣರಾಗುತ್ತಾಳೆ ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡಗಿನ ಮಹಿಳೆಯರು ಎಂಬ ವಿಷಯವನ್ನು ಮಂಡಿಸಿದ ಶಿಕ್ಷಕಿ ರಾಣಿ ರವೀಂದ್ರ ಅವರು, ನೆರೆಯ ಕೇರಳದಂತೆ ಕೊಡಗಿ ನಲ್ಲಿಯೂ ಹೆಚ್ಚು ಮಹಿಳೆಯರು ಸಾಕ್ಷರತೆಯನ್ನು ಪಡೆದು ಶೈಕ್ಷಣಿಕವಾಗಿ ಮುಂದಿದ್ದು, ಹಲವು ಉನ್ನತ ಸ್ಥಾನಗಳಲ್ಲಿಯೂ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎಂದರು.
ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ. ಜಾನಕಿ ಮೋಹನ್ ಅವರು, ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಿದರು.
ವಿಚಾರಗೋಷ್ಠಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಧ್ಯಾಪಕಿ ರೇಖಾವಸಂತ್, ಸೋಮವಾರಪೇಟೆ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ತಂಗಮ್ಮ, ಸೋಮವಾರಪೇಟೆ ತಾಲೂಕು ಆರನೇ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಜಲಕಾಳಪ್ಪ, ವೀರಾಜಪೇಟೆ ತಾಲೂಕು ಐದನೇ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಪೊನ್ನಂಪೇಟೆ ನಿವೃತ್ತ ಶಿಕ್ಷಕಿ ಸಿ.ಜೆ. ಜಾನಕಿ, ಮಲ್ಲಿಗೆ ಭೀಮಯ್ಯ, ದಂಬೆಕೊಡಿ ಸುಶೀಲ ಸುಬ್ರಮಣಿ, ಮಲ್ಲೆಂಗಡ ಬೇಬಿ ಚೋಂದಮ್ಮ, ಸವರಿನ್ ಡಿಸೋಜ ಇದ್ದರು.
ಕಾರ್ಯಕ್ರಮವನ್ನು ರೇವತಿ ರಮೇಶ್, ಚೋಕಿರ ಅನಿತ ದೇವಯ್ಯ, ಚಂದ್ರಿಕಾ, ಅನಿತಾ ಬಿಜೋಯ್, ರಶ್ಮಿ ನಿರ್ವಹಿಸಿದರು.
ಮನಸೂರೆಗೊಂಡ ಭಾವಸಂಗಮ
ರಾಷ್ಟಕವಿಗಳ ಭಾವಗೀತೆ ಒಳಿತು ಮಾಡು ಮನುಸ, ಕುಹೂ ಕುಹೂ ಕೋಗಿಲೆ, ಮುನಿಸು ತರವೇ, ಕಾಣದ ಕಡಲಿಗೆ ಹಂಬಲಿಸಿದೇ ಮನ, ಕರಿಮುಗಿಲು ಬಾನಿನಲ್ಲಿ... ಹೀಗೆ ಭಾವಗೀತೆಗಳನ್ನು ಕಲಾವಿದರು ತಮ್ಮ ಮಧುರ ಕಂಠದಿಂದ ಹಾಡುವ ಮೂಲಕ ಸಾಹಿತ್ಯಾಭಿಮಾನಿಗಳ ಮನಸೂರೆಗೊಳಿಸಿದರು.
(ಮೊದಲ ಪುಟದಿಂದ) ಭಾವ ಸಂಗಮ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ್ದ ಕಲಾವಿದರಾದ ಸುಮತಿ, ರೇಖಾ ಶ್ರೀಧರ್, ಇಂದಿರಾ ಅಂಬೆಕಲ್, ಲಕ್ಷ್ಮಿಹರೀಶ್, ಕಡ್ಲೇರ ತುಳಸಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಮಾಲಾದೇವಿ, ಎನ್.ಪಿ. ಪಂಕಜಾ, ಇಂದುಮತಿ ರವೀಂದ್ರ, ಸುಮಿ ಸುಬ್ಬಯ್ಯ, ಯಶೋದಾ ಹಾಗೂ ಎಸ್.ಎ. ಮುರಳೀಧರ್ ಇವರುಗಳು ಜನಪ್ರಿಯ ಭಾವಗೀತೆಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಭಾವ ಸಂಗಮ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಉದ್ಘಾಟಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ದೀರ್ಘಕೇಶಿ ಶಿವಣ್ಣ, ಎಚ್.ಬಿ. ಜಯಮ್ಮ, ಶನಿವಾರಸಂತೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಭುವನೇಶ್ವರಿ, ಸೋಮವಾರಪೇಟೆ ಪ.ಪಂ. ಸದಸ್ಯೆ ನಳಿನಿ ಗಣೇಶ್, ಗೀತಾ, ಗೌರಮ್ಮ ಉಪಸ್ಥಿತರಿದ್ದರು.
ತಳೂರು ಉಪಾರಾಣಿ ನಾಪೆÇೀಕ್ಲು, ರುಬೀನಾ, ಆಶಾ ಪುಟ್ಟಸ್ವಾಮಿ, ಕೆ.ಆರ್. ಶಾಲಿನಿ, ಡಿ.ಎಸ್. ಪುಷ್ಪಾ ನಿರ್ವಹಣೆ ಮಾಡಿದರು.
ಕವಿಗೋಷ್ಠಿ : ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗಿನ ಲೇಖಕಿ ಸ್ಮಿತಾ ಅಮೃತ್ರಾಜ್ ಅವರು ವಹಿಸಿ, ಮಾತನಾಡಿ, ಸಾಹಿತ್ಯ ನಾಗರಿಕತೆಯ ಜೊತೆ ಭಾವನೆಗಳು ಸೇರಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಮಹಿಳೆಯರು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.
ಕವಿಗೋಷ್ಠಿಯನ್ನು ಕರೋಟಿರ ಶಶಿಸುಬ್ರಮಣಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕಾವೇರಿ ಪ್ರಕಾಶ್, ದಿನಮಣಿ ಹೇಮರಾಜ್, ಹಂಚೆಟ್ಟಿರ ಫ್ಯಾನ್ಸಿಮುತ್ತಣ್ಣ, ಶನಿವಾರಸಂತೆಯ ನಿವೃತ್ತ ಶಿಕ್ಷಕಿ ರುಕ್ಮಿಣಿ, ಕುಶಾಲನಗರದ ನೀರಾಜಾಕ್ಷಿ, ಸಾಹಿತಿ ಸಹನಾ ಕಾಂತಬೈಲ್ ಉಪಸ್ಥಿತರಿದ್ದರು.
ಮಡಿಕೇರಿಯ ಕೃಪಾ ದೇವರಾಜ್ ಅವರು ಗೂಡು ಸೇರುವ ಹೊತ್ತು, ದೊಡ್ಡಮಳ್ತೆಯ ಎಸ್.ಎಂ.ಆಶಾ ಕೊಡಗಿನ ಚಿತ್ತಾರ, ಸುಶೀಲ ಹಾನಗಲ್ ಅವರು ಹೆಣ್ಣಿಗೆಲ್ಲಿದೆ ನ್ಯಾಯ ಎಂಬ ಕವಿತೆಯನ್ನು ವಾಚಿಸಿದರು. ಮಲ್ಲೆಂಗಡ ರೇವತಿ ಪೂವಯ್ಯ, ಲೀಲಾಕುಮಾರಿ ತೊಡಿಕಡಿನ, ಸ್ನೇಹಾಬಸಮ್ಮ, ಶ್ವೇತಾ ರವೀಂದ್ರ, ಶರ್ಮಿಳಾ ರಮೇಶ್, ಎಸ್.ಕೆ.ಈಶ್ವರಿ, ಸಂಗೀತ ರವಿರಾಜ್, ನಂದನ ಮಧುಸೂದನ್, ವಸಂತಿ ರವೀಂದ್ರ, ಆಶಾ ಪುಟ್ಟರಾಜ್, ದೀಪಿಕಾ ಸುದರ್ಶ, ಎಲ್.ಎಂ.ಪ್ರೇಮ, ಅನಿತಾ ಸುಧಾಕರ್, ಲೀಲಾದಯಾನಂದ್, ಪುಷ್ಪಲತಾ, ರಮ್ಯ ಮೂರ್ನಾಡ್, ಕೆ.ಟಿ.ವಾತ್ಸಲ್ಯ ಕವನಗಳನ್ನು ವಾಚಿಸಿದರು.
ಕಾರ್ಯಕ್ರಮವನ್ನು ಸೋಮವಾರಪೇಟೆಯ ರುಬಿಯಾ ನಿರ್ವಹಿಸಿದರು.