ಸೋಮವಾರಪೇಟೆ, ಫೆ. 3: ಸಮೀಪದ ಮಲ್ಲಳ್ಳಿ ಜಲಪಾತದಲ್ಲಿ ಸ್ನಾನಕ್ಕೆ ತೆರಳಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಯುವಕನÀನ್ನು ರಕ್ಷಿಸಲು ಮುಂದಾದ ಪ್ರವಾಸಿ ಇಂಜಿನಿಯರ್ ಪ್ರಾಣ ಕಳೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ.ಬೆಂಗಳೂರಿನ ಎಕ್ಸೆಂಜರ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದ ಸ್ಕಂದ (25) ಮೃತ ದುರ್ದೈವಿ. ಬೆಂಗಳೂರಿನಿಂದ ಸ್ಕಂದ ಸೇರಿದಂತೆ 11 ಮಂದಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು. ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಜಲಪಾತದ ತಳಭಾಗದಲ್ಲಿರುವ (ಮೊದಲ ಪುಟದಿಂದ) ಮರಣ ಬಾವಿ ಎಂದೇ ಕರೆಸಿಕೊಂಡಿರುವ ಹೊಂಡದ ಸಮೀಪ ತೆರಳಿದ್ದಾರೆ. ಈ ಸಂದರ್ಭ ಬಿಹಾರ ಮೂಲದ ಬೆಂಗಳೂರಿನಲ್ಲಿ ನೌಕರಿಯಲ್ಲಿರುವ ಶರ್ಮಾ ಬಿಹಾರ್, ನೀಲೇಶ್ ಮತ್ತು ಅಂಕಿತ್ ಚೌದರಿ ಎಚ್ಚರಿಕೆಯ ಫಲಕವನ್ನು ಗಮನಿಸದೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದು, ಇವರಲ್ಲಿ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈ ಸಂದರ್ಭ ಜೊತೆಗಿದ್ದವರು ಸಹಾಯಕ್ಕಾಗಿ ಕಿರುಚಿದ್ದಾರೆ. ಅಲ್ಲಿಯೇ ಇದ್ದ ಸ್ಕಂದ ಮುಳುಗುತ್ತಿದ್ದವನನ್ನು ರಕ್ಷಿಸಲು ನೀರಿಗೆ ಇಳಿದಿದ್ದಾನೆ. ಬಿಹಾರದ ಮೂವರನ್ನು ದಡ ಸೇರಿಸಿದ್ದಾನೆ. ಆದರೆ ಕೊನೆಯಲ್ಲಿ ಸ್ಕಂದ ಮೇಲೆ ಬರಲಾಗದೆ ಸೇಹಿತರು ನೋಡುತ್ತಿರುವಂತೆಯೇ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.ಕುಟುಂಬದವರ ರೋಧನ : ಮೈಸೂರಿನ ವಿವೇಕಾನಂದ ನಗರದ ಮದುವಧನ ಲೇಔಟ್ ನಿವಾಸಿ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶಂಕರ್, ರೇವತಿ ದಂಪತಿಯ ಒಬ್ಬನೆ ಪುತ್ರನಾಗಿರುವ ಸ್ಕಂದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಸ್ಕಂದ ಆರು ತಿಂಗಳ ಹಿಂದೆ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಪರೀಕ್ಷೆಯ ನಂತರ ಪೋಷಕರಿಗೆ ಒಪ್ಪಿಸಲಾಯಿತು.ಡಿವೈಎಸ್‍ಪಿ ಮುರುಳೀಧರ್, ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಪಿ.ಎಸ್.ಐ. ಶಿವಶಂಕರ್, ಸಿಬ್ಬಂದಿಗಳಾದ ಜಗದೀಶ್, ಶಿವಕುಮಾರ್, ಕುಮಾರ, ಪ್ರವೀಣ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.