ಸೋಮವಾರಪೇಟೆ, ಫೆ. 3: ಇಲ್ಲಿಗೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವ ಸಹಾಯ ಸಂಘದ ವತಿಯಿಂದ ದಿ.ಎಚ್.ಸಿ. ಚಂಗುಣ್ಣಿ ಚಂಗಪ್ಪ ಅವರ ಮೊದಲನೇ ವರ್ಷದ ಜ್ಞಾಪಕಾರ್ಥವಾಗಿ ಒಳಾಂಗಣ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಗೌತಮ್ ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ. 9ರಂದು ನಡೆಯಲಿರುವ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 8ಸಾವಿರ ನಗದು ಹಾ ಆಕರ್ಷಕ ಟ್ರೋಫಿ ನೀಡಲಾಗುವುದು. ದ್ವಿತೀಯ ರೂ 6ಸಾವಿರ ಹಾಗೂ ತೃತೀಯ ರೂ 2ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಫೆ. 7ರೊಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ: 9480238473 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.