ಸುಂಟಿಕೊಪ್ಪ, ಫೆ. 3: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಳೆದ 30 ವರ್ಷಗಳಿಂದ ಪೌರಕಾರ್ಮಿಕರಾಗಿ ತೊಡಗಿಸಿಕೊಂಡಿದ್ದ ರಾಜು ಅವರು ನಿವೃತ್ತರಾಗಿದ್ದು ಗ್ರಾ.ಪಂ. ವತಿಯಿಂದ ಸನ್ಮಾನಿಸಲಾಯಿತು.
ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜು ಹಾಗೂ ಅವರ ಪತ್ನಿ ರತ್ನಾ ಅವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಿಡಿಓ ಮೇದಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ ಹಾಜರಿದ್ದರು.
ಗ್ರಾ.ಪಂ.ಸದಸ್ಯರುಗಳಾದ ಬಿ.ಎಂ. ಸುರೇಶ್, ಸೋಮಯ್ಯ, ಎ. ಶ್ರೀಧರ್ ಕುಮಾರ್, ಜಿ.ಜಿ. ಹೇಮಂತ್ ಕುಮಾರ್, ಕೆ.ಇ. ಕರೀಂ, ರಜಾಕ್, ನಾಗರತ್ನ ಸುರೇಶ್, ರಹೆನಾ ಫೈರೋಜ್, ಉದ್ಯೋಗ ಖಾತ್ರಿ ಅಭಿಯಂತರ ನಿಶಾರಾಣಿ, ಕಾರ್ಯದರ್ಶಿ ಜಿ.ಆರ್. ಶ್ರೀಧರ್ ಕಚೇರಿ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇದ್ದರು.