ಮಡಿಕೇರಿ, ಫೆ. 3: ಭಾರತ ಸರಕಾರದ, ಕ್ರೀಡಾ ಸಚಿವಾಲಯದಡಿಯಲ್ಲಿ ಬರುವ ನೆಹರು ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಮತ್ತು ಮಡಿಕೇರಿಯ ಅಶೋಕ್‍ಪುರದ ಸಂತೋಷ್ ಯುವಕ ಸಂಘದ ಸಹ ಯೋಗದಲ್ಲಿ ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರವನ್ನು ಅಶೋಕ್ ಪುರದ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು. ಡಾ. ಡಿ.ಪಿ. ಸುಮನ್ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷರು, ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಯುವಜನತೆಯೊಂದಿಗೆ ‘ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮತ್ತು ಯುವ ಜನರ ಪಾತ್ರ’ ಎಂಬ ವಿಷಯವಾಗಿ ಸಂವಾದ ನಡೆಸಿಕೊಟ್ಟರು. ಸುಮಾರು 100ಕ್ಕೂ ಹೆಚ್ಚು ಯುವಜನರು ಭಾಗವಹಿಸಿದ್ದರು. ಕಾಲೇಜು ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ದುಶ್ಚಟಗಳ ವ್ಯವಸ್ಥಿತ ಜಾಲದ ಮತ್ತು ಇಲಾಖೆ ತೆಗೆದುಕೊಂಡಿರುವ ಕ್ರಮದ ಬಗ್ಗೆ, ಮೂಲಭೂತ ವ್ಯವಸ್ಥೆಗಳಲ್ಲಿ ಸಮಸ್ಯೆ, ಟ್ರಾಪಿಕ್ ಸಮಸ್ಯೆ, ವಿದ್ಯಾರ್ಥಿನಿಯರ ಮತ್ತು ಮಹಿಳಾ ದೌರ್ಜನ್ಯ ಮತ್ತು ಸಮಸ್ಯೆಗಳು ಹಾಗೂ ಪರಿಹಾರ, ಸುರಕ್ಷತಾ ಕ್ರಮಗಳು ಇತರ ಸಾಮಾಜಿಕ ಪಿಡುಗುಗಳು ಸೇರಿದಂತೆ ಹಲವಾರು ವಿಷಯಗಳ ಮೂಲಕ ಪೊಲೀಸ್ ಅಧೀಕ್ಷಕರೊಂದಿಗೆ ಸಂವಾದದಲ್ಲಿ ಯುವಜನರು ಪಾಲ್ಗೊಂಡಿದ್ದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸದಾಶಿವ ಗೌಡ ವೇದಿಕೆಯಲ್ಲಿದ್ದರು. ಮಂಗಳೂರಿನ ಮೆರಿಡಿಯನ್ ಕಾಲೇಜಿನ ಪ್ರಾಂಶುಪಾಲರಾದ ಜೋಬಿ, ಉಪನ್ಯಾಸಕ ಜಿತಿನ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸದಾಶಿವ ಗೌಡ ಉಪನ್ಯಾಸ ನಡೆಸಿಕೆÀೂಟ್ಟರು. ನೆಹರು ಯುವ ಕೇಂದ್ರದ ಕಚೇರಿ ಉಸ್ತುವಾರಿ ಎನ್. ಫ್ರಾನ್ಸಿಸ್, ಲೆಕ್ಕಾಧಿಕಾರಿ ಬಿ.ಬಿ. ಮಹೇಶ್, ರಾಷ್ಟ್ರೀಯ ಸೇವಾ ಕಾರ್ಯಕರ್ತ ಎಂ.ಬಿ. ವಿವೇಕ್, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಗಣೇಶ್ ತಾಳತ್ತಮನೆ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷರು ರಾಜ್ಯ ಯುವ ಪ್ರಶಸ್ತಿ ವಿಜೇತರಾದ ನವೀನ್ ದೇರಳ, ಸಂತೋಷ್ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಡೀಸ್ ನಿಧನಕ್ಕೆ ಸಂತಾಪ ಸೂಚಿಸಿ, ಮೌನಾಚರಣೆ ನೆರವೇರಿತು.