ವೀರಾಜಪೇಟೆ, ಫೆ. 4: ವೀರಾಜಪೇಟೆ ಬಳಿಯ ಬೇಟೋಳಿ ಮಾದೇವರ ದೇವಸ್ಥಾನದ ಮೂರನೇ ವಾರ್ಷಿಕೋತ್ಸವ ತಾ. 6 ರಂದು ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪಟ್ಟಡ ನೆಹರು ಅಯ್ಯಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವಾಹ್ನ 7 ಗಂಟೆಯಿಂದ ಅಪರಾಹ್ನ 1 ಗಂಟೆಯವರೆಗೆ ಕೇರಳದ ವಿಲಂಗಾರ ನಾರಾಯಣ್ ಬಚ್ಚಾದಿಪಾಡ್ ತಂತ್ರಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳು ಜರುಗಲಿದ್ದು, ಪೂಜಾ ಸೇವೆಯು ನಡೆಯಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಕರ್ತಚಿರ ಚರ್ಮಣ, ಜ್ಯೋತಿ ಉತ್ತಪ್ಪ ಉಪಸ್ಥಿತರಿದ್ದರು.