ಕೂಡಿಗೆ, ಫೆ. 2 : ಕೊಡಗು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ತಾ. 3ರಂದು (ಇಂದು) ನಡೆಯಲಿದೆ.

ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ, 8.45ಕ್ಕೆ ದ್ವಾರಗಳ ಉದ್ಘಾಟನೆ, 9.45 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.

ಉದ್ಘಾಟನಾ ಸಮಾರಂಭವು 11.30ಕ್ಕೆ ನಡೆಯಲಿದ್ದು, ಉದ್ಘಾಟನೆ ಯನ್ನು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ನೆರವೇರಿಸಲಿದ್ದಾರೆ.

ಅಪರಾಹ್ನ 1.30ಕ್ಕೆ ಭಾವ ಸಂಗಮ, 2.30ಕ್ಕೆ ವಿಚಾರ ಗೋಷ್ಠಿ, 3.30ಕ್ಕೆ ಕವಿಗೋಷ್ಠಿ ನಡೆಯಲಿದೆ.

ಸಂಜೆ 4.30ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಆನಂತರ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಸಮ್ಮೇಳನಕ್ಕಾಗಿ ಗಡಿ ಗ್ರಾಮ ಕಣಿವೆ ಶೃಂಗಾರಗೊಂಡಿದ್ದು, ಕಸಾಪ ಪದಾಧಿಕಾರಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.