ಕುಶಾಲನಗರ, ಫೆ. 2: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೂಡಿಗೆ ಡಯಟ್ ಉಪನ್ಯಾಸಕ ಕೆ.ವಿ. ಸುರೇಶ್ ಹೇಳಿದರು.

ಇಲ್ಲಿನ ಅನುಗ್ರಹ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.

ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿದರು. ಅನುಗ್ರಹ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಕೆ. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಅನುಗ್ರಹ ವಿದ್ಯಾಸಂಸ್ಥೆ ಖಜಾಂಚಿ ಕೆ.ಕೆ. ಹೇಮಂತ್‍ಕುಮಾರ್, ಸಹ ಕಾರ್ಯದರ್ಶಿ ಚಂದ್ರಶೇಖರ್, ಟ್ರಸ್ಟಿಗಳಾದ ಶೋಭಾ ಸತೀಶ್, ಶ್ಯಾಮಲಾ ನಾಗೇಂದ್ರ ಹಾಗೂ ಸಂಸ್ಥೆ ಪ್ರಾಂಶುಪಾಲ ಪುಂಡಾರಿನಾಥ್ ನಾಯ್ಡ್ ಉಪಸ್ಥಿತರಿದ್ದರು.