ಸುಂಟಿಕೊಪ್ಪ, ಫೆ. 2: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಜೀರ್ಣೋದ್ಧಾರದ ಅಂಗವಾಗಿ ದೇವಾಲಯದ ಆವರಣದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅಡಿಗಲ್ಲಿಟ್ಟು ವಿಶೇಷ ಪೂಜೆಯನ್ನು ಜೀರ್ಣೋದ್ಧಾರ ಸಮಿತಿ ವತಿಯಿಂದ ನಡೆಸಲಾಯಿತು.

10 ಶತಮಾನಗಳ ಇತಿಹಾಸವುಳ್ಳ ಮತ್ತು ಪೂಜಿಸಿಕೊಂಡು ಬರುತ್ತಿದ್ದ ಗ್ರಾಮದೇವತೆ, ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ, ಶ್ರೀ ತಿರುವಪ್ಪ ನಾಗದೇವರ ಮತ್ತು ಉಪದೈವಗಳ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ್ದಂತೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಜೀರ್ಣೋದ್ದಾರದ ಮತ್ತು ಪ್ರತಿಷ್ಠಾಪನೆ ಅಂಗವಾಗಿ ನೂತನ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ದೇವಾಲಯದ ಆರ್ಚಕ ಮಂಜುನಾಥ್ ಉಡುಪ ಅವರು ಶಿಲಾ ಕಲ್ಲಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಬೆಳಿಗ್ಗೆ 7.30 ಗಂಟೆಗೆ ಗ್ರಾಮದೇವತೆ ಬನದಲ್ಲಿ ದೇವಾಲಯ ನಿರ್ಮಾಣಕ್ಕೆ ಗುತ್ತಿ ಪೂಜೆಯನ್ನು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆರ್ಚಕ ಗಣೇಶ ಉಪದ್ಯಾಯ ಅವರು ನೇರವೇರಿಸಿದರು.

ಈ ಸಂದರ್ಭ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಗೌರವ ಕಾರ್ಯದರ್ಶಿ ಡಾ. ಶಶಿಕಾಂತ ರೈ, ಕಾಫಿ ಬೆಳೆಗಾರರಾದ ಎಸ್.ಬಿ. ಶಂಕರ್, ಸುಬ್ರಮಣ್ಯ ಭಟ್, ಹಿರಿಯರಾದ ಎಂ.ಎ. ವಸಂತ, ಕೆ.ಪಿ. ಜಗನ್ನಾಥ್, ಜಗದೀಶ್ ರೈ, ಪಟ್ಟೆಮನೆ ಶೇಷಪ್ಪ, ಪಟ್ಟೆಮನೆ ಉದಯ ಕುಮಾರ್, ಜೆ.ಎನ್. ಚಂದ್ರಶೇಖರ್, ವಿ.ಎ. ಸಂತೋಷ್, ಸುದರ್ಶನ್ ನಾಯ್ಡು, ವಿನೋದ್, ದೀನು ದೇವಯ್ಯ, ಎ.ಶ್ರೀಧರ್ ಕುಮಾರ್, ಬಿ.ಕೆ. ಪ್ರಶಾಂತ್ ಕೊಕ್ಕಾ, ಬಿ.ಐ. ಭವಾನಿ, ಜಾನು ಭಾಸ್ಕರ್, ಕಮಲ ವೆಂಕಪ್ಪ ರೈ, ಶಾರಾದ, ಕೆ.ಎಸ್. ಅನಿಲ್ ಕುಮಾರ್, ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಸುರೇಶ್ ಗೋಪಪಿ, ಧನು ಕಾವೇರಪ್ಪ, ಕಾರ್ಕಳದ ಶಿಲ್ಪಿಗಳಾದ ಲೋಹೀತ್ ತಂಡದವರು ಮತ್ತಿತರರು ಇದ್ದರು.