ಗೋಣಿಕೊಪ್ಪ ವರದಿ, ಫೆ. 2 : ಚಿರಿಯಪಂಡ ಕುಶಾಲಪ್ಪ ಸ್ಮರಣಾರ್ಥ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.

ಅಂತಿಮ ಪಂದ್ಯದಲ್ಲಿ ಮಂಗಳೂರು ಸೆಂಟ್ ಅಲೋಸಿಯಸ್ ತಂಡದ ವಿರುದ್ದ ಸೆಣಸಾಡಿ 3-1 ಗೋಲುಗಳ ಮೂಲಕ ಜಯ ಸಾಧಿಸಿತು. ಕಾವೇರಿ ಕಾಲೇಜು ಪರ ಉತ್ತಯ್ಯ 2 ಗೋಲು, ಸೋಮಣ್ಣ 1 ಗೋಲು ಹೊಡೆದರು.