ಕರಿಕೆ, ಫೆ. 2: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆ ಆರಂಭವಾದ ಹಿನ್ನೆಲೆ ಕಾಡ್ಗಿಚ್ಚು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಅರಣ್ಯ ಪಡೆ ಬೆಂಗಳೂರು ಇವರ ಆದೇಶದಂತೆ ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ವನ್ಯಧಾಮಗಳಲ್ಲಿ ಪ್ರವಾಸಿಗರು ಹಾಗೂ ಇತರ ಚಾರಣಿಗರಿಗೆ ಅರಣ್ಯದೊಳಗೆ ಚಾರಣ (ಟ್ರಕ್ಕಿಂಗ್) ನಿಷೇಧಿಸಿ ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ ಅವರು ಆದೇಶ ಹೊರಡಿಸಿದ್ದಾರೆ.