ನವದೆಹಲಿ, ಫೆ. 1: ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ 2019ನೇ ಸಾಲಿನ ಮಧ್ಯಂತರ ಆಯವ್ಯಯ ಪತ್ರವನ್ನು ವಿತ್ತ ಸಚಿವ ಪಿಯೂಶ್ ಗೋಯೆಲ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದರು. ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಡೇರಿದೆ. ಆಯವ್ಯಯ ಪತ್ರದ ಮುಖ್ಯಾಂಶಗಳು ಈ ಕೆಳಗಿನಂತಿವೆ ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ. 5 ಲಕ್ಷ ರೂ. ಆದಾಯವಿರುವವರು ತೆರಿಗೆಯಿಂದ ಮುಕ್ತ. 5 ರೂ. ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ. ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಜೆಟ್ ಮಂಡನೆಯಲ್ಲಿ ಮಾಹಿತಿ ನೀಡಿದ ಗೋಯಲ್ ಅವರು, 5 ಲಕ್ಷ ರೂ. ವರೆಗೂ ಆದಾಯ ಹೊಂದಿರುವವರಿಗೆ ಯಾವದೇ ತೆರಿಗೆ ಇರುವದಿಲ್ಲ. ಅಂತೆಯೇ ಶೇ. 5 ರಷ್ಟು ಇದ್ದ ತೆರಿಗೆಯನ್ನೂ ರದ್ದುಗೊಳಿಸಿರುವದಾಗಿ ಘೋಷಿಸಿದರು. ವಾರ್ಷಿಕ 6.5 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರು ಸಣ್ಣ ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಿದರೆ ಇವರಿಗೂ ಸಹ ತೆರಿಗೆ ವಿನಾಯಿತಿ ದೊರೆಯಲಿದೆ. ಐಟಿ ರಿಟನ್ರ್ಸ್‍ನ ಎಲ್ಲಾ ವಿಧಾನಗಳನ್ನು ಡಿಜಿಟಿಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳಿಂದ ರಹಿತ, ಆನ್‍ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ. ಭವಿಷ್ಯ ನಿಧಿ ಹಾಗೂ ವಿಮೆಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಇರುತ್ತದೆ. ಗೃಹಸಾಲದ ಮಿತಿ 1.5 ಲಕ್ಷ ರೂ. ನಿಂದ 2 ಲಕ್ಷ ರೂ.ಗೆ ಏರಿಕೆ. ವೇತನ ಪಡೆಯುವ ಹಿರಿಯ ಉದ್ಯೋಗಿಗಳಿಗೆ ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯಲ್ ಸಿಹಿ ಸುದ್ದಿ ನೀಡಿದ್ದು, ಉದ್ಯೋಗಿಗಳ ಗ್ರಾಚ್ಯುಟಿ ಮಿತಿಯನ್ನು 10 ಲಕ್ಷ ರೂ.ಗಳಿಂದ 30 ಲಕ್ಷ ರೂಗಳಿಗೆ ಏರಿಕೆ ಮಾಡಿರುವದಾಗಿ ಘೋಷಣೆ ಮಾಡಿದ್ದಾರೆ. ನೋಟು ರದ್ಧತಿ ಬಳಿಕ ಕಪ್ಪು ಹಣ ಸಂಗ್ರಹ ಅನಾವರಣ, 1.30 ಲಕ್ಷ ಕೋಟಿ ರೂ. ಅಘೋಷಿತ ಆದಾಯ ಪತ್ತೆ. 3.38 ಲಕ್ಷ ಶೆಲ್ ಕಂಪೆನಿಗಳು ರದ್ದು. ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕ್ರಮ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ. ಬೀದಿಬದಿ ವ್ಯಾಪಾರಿ, ರಿಕ್ಷಾವಾಲಾಗೆ ಸೇರಿದಂತೆ ಅಸಂಘಟಿತ ಕಾರ್ಮಿ ಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಂದಾನ್ ಪಿಂಚಣಿ ಯೋಜನೆ. ಪ್ರತಿ ತಿಂಗಳು 100 ರೂ.ಕಟ್ಟುವ ಮೂಲಕ ಯೋಜನೆಗೆ ನೋಂದಾಯಿ ಸಿಕೊಳ್ಳಬಹುದು. 60 ವರ್ಷದ ಬಳಿಕ ಪ್ರತಿ ತಿಂಗಳು 3,000 ರೂ. ಪಿಂಚಣಿ ಸೌಲಭ್ಯ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೊಬೈಲ್ ತಯಾರಿಕೆ. ಮೊಬೈಲ್ ಡಾಟಾ ಬಳಕೆ ಶೇ. 50 ರಷ್ಟು ಹೆಚ್ಚಳ. ವಿದೇಶಿ ನೇರ ಹೂಡಿಕೆ (ಎಫ್‍ಡಿಎ) ಪ್ರಮಾಣ ಹೆಚ್ಚಳ. ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ.

ವಾರ್ಷಿಕವಾಗಿ ಸಣ್ಣ ಮತ್ತು ಬಡ ರೈತರಿಗೆ 6 ಸಾವಿರ ರೂಪಾಯಿ ಧನ ಸಹಾಯ ಘೋಷಿಸಿರುವ ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಉದ್ಯೋಗ ಅವಕಾಶಗಳ ಸೃಷ್ಟ್ಟಿಗೆ ವಾರ್ಷಿಕ

(ಮೊದಲ ಪುಟದಿಂದ) 60 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

ಗೋವುಗಳ ರಕ್ಷಣೆ ಮತ್ತು ಅವುಗಳ ಉತ್ಪನ್ನಗಳ ಬಳಕೆಗೆ ಯೋಜನೆಗಳು ಮತ್ತು ಅನುದಾನ ಮೀಸಲಿಡಲಾಗಿದೆ. ಇದರಿಂದ ಸುಮಾರು 12 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಗ್ರಾಮೀಣ ಭಾಗದ ಜನಜೀವನ ಮಟ್ಟ ಸುಧಾರಣೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ ನಿರ್ಮಾಣ, ಸಂಚಾರ ಸೌಲಭ್ಯಗಳಿಗೆ 14.80 ಲಕ್ಷ ಜನರಿಗೆ ಅನುಕೂಲವಾಗಿದೆ ಎಂದರು.

ಸ್ವಚ್ಛತಾ ಭಾರತ ಅಭಿಯಾನ ಬದಲಾವಣೆ 5.45 ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತವಾಗಿದ್ದು, ಇದಕ್ಕೆ ಸ್ವಚ್ಛತಾ ಭಾರತ ಅಭಿಯಾನದ ಕಾಣಿಕೆ ದೊಡ್ಡದು. ಆರೋಗ್ಯ ವಲಯದಲ್ಲಿ ಬಹುದೊಡ್ಡ ಕ್ರಾಂತಿಯಾಗಿದ್ದು, ಆಯುಷ್ಮಾನ್ ಭಾರತ್ ಮೂಲಕ 50 ಕೋಟಿ ಜನರಿಗೆ ಸೌಲಭ್ಯ ಸಿಗಲಿದೆ. ಜನೌಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ ಸಿಗಲಿದೆ. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಸರ್ಕಾರದ ಅವಧಿಯಲ್ಲಿ ಗೃಹ ನಿರ್ಮಾಣ 5 ಪಟ್ಟು ಏರಿಕೆಯಾಗಿದೆ. ಪಿಎಂ ಅವಾಸ ಯೋಜನೆಯಡಿ ಗೃಹ ನಿರ್ಮಾಣ ಕಾರ್ಯ ಹೆಚ್ಚಿನ ಪ್ರಮಾಣದಲ್ಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‍ಗೆ 75 ಸಾವಿರ ಕೋಟಿ, ದೇಶದ ಸಣ್ಣ ಹಿಡುವಳಿದಾರರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ನೇರ ನಗದು ಮೊತ್ತ ಘೋಷಿಸಿದೆ. 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಖಾತೆಗೆ ಮೂರು ಕಂತುಗಳಲ್ಲಿ 2 ಸಾವಿರ ವರ್ಗಾವಣೆ ಮಾಡಲಾಗುವದು. ರೈತರ ಕನಿಷ್ಟ ಬೆಂಬಲ ಬೆಲೆ 1.5 ರಷ್ಟು ಹೆಚ್ಚಳ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭ ಸಿಗಲಿದೆ. ಇದಕ್ಕಾಗಿ 75 ಸಾವಿರ ಕೋಟಿ ಮೀಸಲು ಇಡಲಾಗಿದೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತ ವರ್ಗಕ್ಕೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವದು. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ ಸೌಲಭ್ಯ ಕಲ್ಪಿಸಲಾಗುವದು. ಕೇಂದ್ರವು ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆಗೆ ಚಿಂತನೆ ನಡೆಸಿದೆ. ಇಎಸ್‍ಐ ಯೋಜನೆ ಎರಡು ವರ್ಷದಲ್ಲಿ ಸುಮಾರು 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ರೂ. 21 ಸಾವಿರ ಸಂಬಳ ಪಡೆಯುವವರಿಗೆ ಇಎಸ್‍ಐ ಯೋಜನೆ ಸಿಗಲಿದೆ. ಇಎಸ್‍ಐ ಆದಾಯ ಮಿತಿಯನ್ನು 15 ಸಾವಿರದಿಂದ 21 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪ್ರತಿ ತಿಂಗಳು 100 ರೂಪಾಯಿ ಹೂಡುವ ಮೂಲಕ ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದು. ಬಹುಮುಖ್ಯವಾಗಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ ಜಾರಿ ತರಲಾಗುವದು. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿದಂತೆ ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು ರೂ. 3 ಸಾವಿರ ಪಿಂಚಣೆ ಸೌಲಭ್ಯ ಸಿಗಲಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್‍ಪಿಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಈಗಾಗಲೇ ಸುಮಾರು 6 ಕೋಟಿ ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ದೇಶದಲ್ಲಿರುವ ಸಾವಿರಾರು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಅಲೆಮಾರಿ ನಿಗಮ ಸ್ಥಾಪನೆ ಮಾಡಲಾಗುವದು. ಜೊತೆಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿ ತಂದು ಆ ಮೂಲಕ ಒಂದು ಕೋಟಿ ಯುವಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವದು. ಮುದ್ರಾ ಯೊಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ, ಸಣ್ಣ ಉದ್ಯಮಿಗಳಿಗೆ ಬಡ್ಡಿ ವಿನಾಯಿತಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವದು. ಉಡಾನ್ ಯೋಜನೆ ಮೂಲಕ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು ಐದು ವರ್ಷಗಳಲ್ಲಿ ದುಪ್ಪಟ್ಟು ಮಾಡಲಾಗುವದು. ಜೊತೆಗೆ ಉಡಾನ್ ಯೋಜನೆ ಮೂಲಕ ಜನಸಾಮಾನ್ಯರ ವಿಮಾನಯಾನ ಕನಸು ನನಸು ಮಾಡಲಾಗುವದು. ವಿಮಾನಯಾನ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗಾವಕಾಶ ನೀಡುವಲ್ಲಿ ಮಹತ್ವದ ಯೋಜನೆ. ಸರ್ಕಾರ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿ ವಿಶೇಷ ರೂಪುರೇಷೆಗೆ ನಾಂದಿ ಹಾಡಲಿದೆ. ಈಗಾಗಲೇ ಮೊಬೈಲ್ ಡೇಟಾ ಬಳಕೆದಾರರ ಪ್ರಮಾಣ ಶೇ. 50ರಷ್ಟು ಏರಿಕೆಯಾಗಿದೆ, ತೆರಿಗೆ ಸಂಗ್ರಹ ದುಪ್ಪಟ್ಟು ತೆರಿಗೆ ಸಂಗ್ರಹ ದ್ವಿಗುಣವಾಗಿದ್ದು, ಇದು 12 ಲಕ್ಷ ಕೋಟಿ ಮೀರಿದೆ.

ದೇಶದ ಇತಿಹಾಸದಲ್ಲೇ ಪ್ರಥಮ ಬಾರಿ ರೂ. 3 ಲಕ್ಷ ಕೊಟಿಯಷ್ಟು ರಕ್ಷಣಾ ಬಜೆಟ್ ಮೀಸಲಿರಿಸಿದೆ. ಜತೆಗೆ ಉಳಿತಾಯ ಯೋಜನೆಗಳ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಹಾಗೂ ಉಳಿತಾಯ ಯೋಜನೆಗಳ ಮೇಲೆ ರೂ. 1.5 ಲಕ್ಷದವರೆಗೆ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ರೂ. 2 ಲಕ್ಷದವರೆಗಿನ ಗೃಹ ಸಾಲ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಒತ್ತು - ರಾಷ್ಟ್ರೀಯ ಶಿಕ್ಷಣ ಯೋಜನೆಗೆ ರೂ. 38,572 ಕೋಟಿ ಅನುದಾನ ಮೀಸಲು.

ರೂ. 76 ಸಾವಿರ ಕೋಟಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ರೂ. 50 ಸಾವಿರ ಕೋಟಿ ಅನುದಾನ ಇರಿಸಿದೆ.