ಮಡಿಕೇರಿ, ಫೆ. 1: ಕೊಡಗಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ತಾನು ವಹಿಸಿರುವ ಕೆಲಸಗಳನ್ನು ಎರಡೂವರೆ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಕೆಲಸದ ಗುಣಮಟ್ಟದಲ್ಲಿ ಯಾವದೇ ರೀತಿಯ ರಾಜಿ ಮಾಡಿಕೊಳ್ಳದೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವ ಹಿಸಬೇಕೆಂದು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪುನರ್‍ವಸತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಡಗು ಪುನರ್ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಅಗತ್ಯ ಅನುದಾನ ಒದಗಿಸಲಿದೆ. ಆದ್ದರಿಂದ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಏನೇ ಮಡಿಕೇರಿ, ಫೆ. 1: ಕೊಡಗಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ತಾನು ವಹಿಸಿರುವ ಕೆಲಸಗಳನ್ನು ಎರಡೂವರೆ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಕೆಲಸದ ಗುಣಮಟ್ಟದಲ್ಲಿ ಯಾವದೇ ರೀತಿಯ ರಾಜಿ ಮಾಡಿಕೊಳ್ಳದೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವ ಹಿಸಬೇಕೆಂದು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪುನರ್‍ವಸತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊಡಗು ಪುನರ್ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಅಗತ್ಯ ಅನುದಾನ ಒದಗಿಸಲಿದೆ. ಆದ್ದರಿಂದ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಏನೇ ಆರೋಪಿಸಿದರು. ಪ್ರತಿಕ್ರಿಯಿಸಿದ ಸಚಿವ ಮಹೇಶ್ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲೂ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಹಲವು ಕಾರಣಗಳಿಂದ ಕೊಂಚ ತಡವಾಗುತ್ತಿದೆ.

(ಮೊದಲ ಪುಟದಿಂದ) ಆದರೂ ಜನರಿಗೆ ನೀಡಿರುವ ಭರವಸೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ. ಇದರಲ್ಲಿ ಯಾವದೇ ಸಂದೇಹ ಬೇಡ. ತಾ. 10 ರಂದು ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಲಾಗುವದೆಂದರು.

ಆರೋಪ ಸತ್ಯಕ್ಕೆ ದೂರ

ಸಂತ್ರಸ್ತರಿಗೆ ಬಂದ ಹಣದಲ್ಲಿ 7 ಕೋಟಿಯಷ್ಟು ಕಂಬಳಿ ಖರೀದಿಸಲಾಗಿದೆ ಎಂದು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ ಸಾ.ರಾ. ಮಹೇಶ್ ಸಂತ್ರಸ್ತರಿಗಾಗಿ ಬಂದಿರುವ ಹಣ ದುರುಪಯೋಗವಾಗಿಲ್ಲ. ಈ ಬಗ್ಗೆ ಸಂದೇಹವಿದ್ದರೆ ಮುಂದಿನ ಸಭೆಯಲ್ಲಿ ಸಂತ್ರಸ್ತರಿಗೆ ಬಂದ ಹಣದ ಖರ್ಚು ವೆಚ್ಚದ ಕುರಿತು ಶ್ವೇತ ಪತ್ರ ಹೊರಡಿಸಲು ಕೂಡ ಸರ್ಕಾರ ಸಿದ್ಧವಿದೆ ಎಂದರು. ಸಂತ್ರಸ್ತರಿಗಾಗಿ ಬಂದ 31 ಕೋಟಿ ರೂ. ಚೆಕ್‍ಗಳು ಬೌನ್ಸ್ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಚೆಕ್‍ಗಳನ್ನು ಬ್ಯಾಂಕ್‍ಗೆ ಹಾಜರುಪಡಿಸಲು ತಡವಾದ ಕಾರಣದಿಂದಾಗಿ ಬೌನ್ಸ್ ಆಗಿರಬಹುದು. ಹಾಗೆಂದು ಸರ್ಕಾರ ಸುಮ್ಮನಾಗುವದಿಲ್ಲ ಹಣ ನೀಡಲಿದೆ ಎಂದರು.

ಜಿಲ್ಲಾಧಿಕಾರಿ 3 ತಿಂಗಳು ರಜೆ

ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರು ಪೋಷಕರ ಅನಾರೋಗ್ಯದ ಹಿನ್ನೆಲೆಯಲ್ಲಿ ತನ್ನೊಂದಿಗೆ ಚರ್ಚಿಸಿ ರಜೆ ಮಾಡಿದ್ದರು. 3 ತಿಂಗಳು ರಜೆ ಹಾಕಿದ್ದ ಅವರನ್ನು ಆದಷ್ಟು ಬೇಗ ಕರ್ತವ್ಯಕ್ಕೆ ಹಾಜರಾಗಬೇಕೆಂದು ತಾನು ಮನವಿ ಮಾಡಿದ್ದೆ. ಆದರೆ ಬರಲು ಸಾಧ್ಯವಿಲ್ಲ ಎಂದು ಶ್ರೀವಿದ್ಯಾ ಸಾರ್ವತ್ರಿಕ ಸಭೆಗೂ ಮುನ್ನ ಸಚಿವ ಮಹೇಶ್ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಸಿದರು. ಈ ಸಭೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿಯವರು ಉಪಸ್ಥಿತರಿದ್ದರು. ಮುಖ್ಯವಾಗಿ ಸಂತ್ರಸ್ತರಿಗೆ ಪುನರ್‍ವಸತಿ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಶಾಸಕರುಗಳು ಮಡಿಕೇರಿ ಕಂದಾಯ ಇಲಾಖೆಯ ಪರಿವೀಕ್ಷಕರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸಚಿವ ಮಹೇಶ್ ಅವರು, ತಹಶೀಲ್ದಾರ್ ಕುಸುಮ ಅವರಿಗೆ ಮುನ್ನೆಚ್ಚರಿಕೆ ನೀಡಿ ಕಂದಾಯ ಪರಿವೀಕ್ಷಕರು ಪುನರ್‍ವಸತಿಯ ಸ್ಥಳಕ್ಕೆ ತೆರಳಿ ಸೂಕ್ತ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಮತ್ತೊಮ್ಮೆ ಈ ಬಗ್ಗೆ ಪುಕಾರು ಬಂದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವದಾಗಿ ಎಚ್ಚರಿಸಿದರು.

ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಗುತ್ತಿಗೆ ಪಡೆದಿರುವ ರಾಜೀವ್‍ಗಾಂಧಿ ವಸತಿ ನಿರ್ಮಾಣ ನಿಗಮದ ಅಧಿಕಾರಿಗಳು ಸಮರ್ಪಕ ವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಶಾಸಕರುಗಳು ಆರೋಪಿಸಿದರು. ಮನೆಗಳ ನಿರ್ಮಾಣ ಸಂದರ್ಭ ಕೈಗೊಳ್ಳಬೇಕಾದ ಅಗತ್ಯ ‘ಕ್ಯೂರಿಂಗ್’ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಶಾಸಕರುಗಳು ಆರೋಪಿಸಿದರು. ಈ ಸಂದರ್ಭ ಸಚಿವರು ಸಭೆಯಲ್ಲಿ ಆಗಿಂದಾಗ ನಿಗಮದ ಅಧಿಕಾರಿಗಳು ಯಾರಿದ್ದಾರೆ ಕರೆಯಿರಿ ಎಂದು ಜಿಲ್ಲೆಯ ಅಧಿಕಾರಿಗಳನ್ನು ಕೇಳಿಕೊಂಡರೂ ನಿಗಮದ ಯಾವೊಬ್ಬ ಪ್ರತಿನಿಧಿಯು ಸಭೆಗೆ ಬಂದಿಲ್ಲ ಎಂದು ಅಧಿಕಾರಿಗಳು ಮಾರುತ್ತರ ನೀಡಿದರು. ನಿಗಮದ ಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಸಚಿವರನ್ನು ಕಡೆಗಣಿಸಿರುವಷ್ಟರ ಮಟ್ಟಿಗೆ ಸಭೆಯಲ್ಲಿ ಹಾಜರಾಗದೆ ನಿರ್ಲಕ್ಷ್ಯ ಧೋರಣೆ ತಾಳಿದ್ದುದು ಸ್ಪಷ್ಟವಾಗಿತ್ತು.

ಈ ನಡುವೆ ಕೆಲವರು ಮನೆ ಕಳೆದುಕೊಂಡ ಸಂತ್ರಸ್ತರು ತಮ್ಮ ಗ್ರಾಮದಲ್ಲಿ ಮನೆಗಳು ಬಿದ್ದ ಕಡೆಯೇ ನೂತನ ಮನೆಗಳನ್ನು ನಿರ್ಮಿಸಿಕೊಳ್ಳಲು ಆಸಕ್ತಿ ತಳೆದಿದ್ದಾರೆ ಎಂದು ಶಾಸಕ ಬೋಪಯ್ಯ ಅವರು ಅರ್ಜಿಗಳ ಸಹಿತ ಸಚಿವರ ಗಮನಕ್ಕೆ ತಂದರು. ಇಂತಹ ಮನವಿಗಳಿದ್ದರೆ ಆ ಸಂತ್ರಸ್ತರಿಗೆ ಅದೇ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶನವಿತ್ತರು. ಸಂತ್ರಸ್ತರು ತಾವೇ ಮನೆಗಳನ್ನು ನಿರ್ಮಿಸಿಕೊಳ್ಳಬಹುದು. ಅಂತವರಿಗೆ ನಾಲ್ಕು ಹಂತಗಳಲ್ಲಿ ನಿಗದಿತ ಹಣವನ್ನು ಬಿಡುಗಡೆ ಮಾಡುವಂತೆ ಸಚಿವರು ಸೂಚಿಸಿದರು. ತಾವು ಬಯಸಿದ ಕಡೆ ಮನೆ ನಿರ್ಮಿಸಿಕೊಳ್ಳಲು ಆ ನಿವೇಶನದಲ್ಲಿ ಅನುಮತಿಗೆ ಅಧಿಕಾರಿಗಳು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಶಾಸಕ ಅಪ್ಪಚ್ಚುರಂಜನ್ ಗಮನಕ್ಕೆ ತಂದರು. ಅಂತಹ ಸಂದರ್ಭ ತಕ್ಷಣವೇ ಅನುಮತಿ ನೀಡಲು ಕ್ರಮಕೈಗೊಳ್ಳುವಂತೆಯೂ ಸಚಿವರು ಕಂದಾಯಾಧಿಕಾರಿಗಳಿಗೆ ನಿರ್ದೇಶನವಿತ್ತರು.