ಮೂರ್ನಾಡು, ಜ. 30: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಚೆರಿಯಪಂಡ ಕುಶಾಲಪ್ಪ ಮೆಮೋರಿಯಲ್ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜಿನ ಪುರುಷರ ಹಾಕಿ ಕ್ರೀಡಾಕೂಟದ ಮುಕ್ತಾಯ ಸಮಾರಂಭ ನಿನ್ನೆ ಸಂಜೆ ನೆರವೇರಿತು.
ಕಳೆದು ಎರಡು ದಿನದಿಂದ ನೆಡೆದ ಪುರುಷರ ಹಾಕಿ ಪಂದ್ಯಾಟದ ಅಂತಿಮ ಹಣಾಹಣಿಯು ಕಾವೇರಿ ಕಾಲೇಜು ಗೋಣಿಕೊಪ್ಪ ಹಾಗೂ ಸೆಂಟ್ ಅಲೋಶಿಯಸ್ ಮಂಗಳೂರು ತಂಡದ ನಡುವೆ ನೆಡೆದ ಅಂತಿಮ ಪಂದ್ಯಾಟದ ಉದ್ಘಾಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನೆರವೇರಿಸಿ, ಹಾಕಿ ಪಟುಗಳಿಗೆ ಶುಭ ಕೋರಿದರು.
ಸೆಂಟ್ ಅಲೋಶಿಯಸ್ ತಂಡ ಒಂದು ಗೋಲು ಬಾರಿಸುತ್ತಿದ್ದಂತೆ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. ಕಾವೇರಿ ಕಾಲೇಜು ತಂಡ ನಂತರ ಸತತ ಮೂರು ಗೋಲುಗಳನ್ನು ಬಾರಿಸುವದರೊಂದಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಮುಖ್ಯ ಅತಿಥಿಗಳಾಗಿ ಮೂರ್ನಾಡಿನ ಕಾಫಿ ಬೆಳೆಗಾರರಾದ ಪಾಂಡಂಡ ಯಧು ಮೇದಪ್ಪ, ದಾನಿಗಳಾದ ಕಮಲು ಮುದ್ದಯ್ಯ, ಜನರಲ್ ಕೆ.ಎಸ್ ತಿಮ್ಮಯ್ಯ ಅಕಾಡೆಮಿಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮೂರ್ನಾಡು ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯ ಬ್ರೀಗೇಡ್‍ನ ನಿರ್ದೇಶಕ ನಂದೇಟಿರ ರಾಜ ಮಾದಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಸಂಸ್ಥೆಯ ಇತರ ನಿರ್ದೇಶಕರು ಸೇರಿ ವಿಜೇತರಿಗೆ ಟ್ರೋಫಿ ವಿತರಿಸಿದರು.