ಸಿದ್ದಾಪುರ, ಜ.30: ಸಮೀಪದ ಅಮ್ಮತ್ತಿಯ ದಲಿತ ಸಂಘಟನೆಯ ವತಿಯಿಂದ ಫೆ 23 ಮತ್ತು 24 ರಂದು ಭೀಮ ಕಪ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವದಾಗಿ ಸಂಘದ ಅಧ್ಯಕ್ಷ ನಿತೀಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ದಲಿತರ ನಡುವಿನ ಕ್ರಿಕೆಟ್ ಪಂದ್ಯಾಟವು ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವದು. ಭಾಗವಹಿಸಲು ಇಚ್ಛಿಸುವ ತಂಡಗಳು ಫೆ 15 ರೊಳಗೆ ತಂಡಗಳ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ತಂಡಗಳು 9449814393 ಮತ್ತು 9482906160 ಸಂಖ್ಯೆಗೆ ಸಂಪರ್ಕಿಸಲು ಕೋರಿ ಕೊಂಡಿದ್ದಾರೆ. ಗೋಷ್ಠಿಯಲ್ಲಿ ಕಾರ್ಯದರ್ಶಿ ರಾಮು ಹಾಗೂ ಸದಸ್ಯ ಅವಿನಾಶ್ ಇದ್ದರು.