*ಗೋಣಿಕೊಪ್ಪಲು, ಜ. 30: ಹಿರಿಯರನ್ನು ಕಾಲು ಮುಟ್ಟಿ ನಮಸ್ಕರಿಸುವ ಸಂಸ್ಕøತಿ ಕೊಡವ ಪದ್ಧತಿಯಲ್ಲಿ ಕಾಣುವದು ಜಗತ್ತಿಗೆ ಶ್ರೇಷ್ಟವಾಗಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ, ಶಾರದಾಶ್ರಮದ ಅಧ್ಯಕ್ಷ ಬೋದ ಸ್ವರೂಪ ನಂದಾಜಿ ಮಹಾರಾಜ್ ಕೊಡವ ಪದ್ಧತಿಯ ಬಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾವೇರಿ ಕಾಲೇಜು ಗೋಣಿಕೊಪ್ಪ ಇವರ ಜಂಟಿ ಆಶ್ರಯದಲ್ಲಿ ಮಂಡೇಪಂಡ ಅಕ್ಕಮ್ಮ ಗಣಪತಿ ಸ್ಮಾರಕ ದತ್ತಿ ಉಪಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕೊಡವ ಸಂಸ್ಕøತಿ ಶ್ರೇಷ್ಟ ಮತ್ತು ವಿಭಿನ್ನ ಸಂಪ್ರದಾಯವಾಗಿದೆ. ಹಿರಿಯರು ಬಿಟ್ಟುಹೋದ ಇಂತಹ ಅಮೂಲ್ಯ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಹಿರಿಯರ ಮುಂದೆ ತಗ್ಗಿಬಗ್ಗಿ ವಿನಯತೆಯಿಂದ ನಡೆದರೆ ನಾವು ಉನ್ನತ ಮಟ್ಟಕ್ಕೆ ಏರುತ್ತೇವೆ ಎಂದು ಪ್ರವಚನ ನೀಡಿದರು.

ಕೊಡವ ಸಂಸ್ಕøತಿ ಮಹಿಳೆ ಮತ್ತು ಸಾಹಿತ್ಯ ವಿಚಾರವಾಗಿ ಉಪನ್ಯಾಸ ನೀಡಿದ ಸಾಹಿತಿ ಬಾಚರಣೆಯಂಡ ರಾಣು ಅಪ್ಪಣ್ಣ ಅವರು ಸಂಸ್ಕøತಿ ಎಂದರೆ ನಮ್ಮ ನಡೆನುಡಿಯಾಗಿರುತ್ತದೆ. ವಿಶ್ವ ಮಾನ್ಯತೆಯನ್ನು ಪಡೆದ ಕೊಡವ ಸಂಸ್ಕøತಿ ಇಪ್ಪತ್ತನೇ ಶತಮಾನದಿಂದ ಈಚೇಗೆ ಅಳಿವಿನಂಚಿನಲ್ಲಿದೆ. ಎಂದು ಬೇಸರ ವ್ಯಕ್ತ ಪಡಿಸಿದ ಅವರು ಹಿಂದೆ ಅವಿಭಕ್ತ ಕುಟುಂಬ ಇದ್ದಾಗ ಪದ್ಧತಿ ಆಚರಣೆಗಳು ಜೀವಂತವಾಗಿದ್ದವು. ಇಂದು ಅವಿಭಕ್ತ ಕುಟುಂಗಳು ಇಲ್ಲದಿರುವಂತೆ, ಭಾಷೆ ಹಾಗೂ ಸಂಸ್ಕøತಿ ನಾಶವಾಗುತ್ತಿದೆ. ಸಂಸ್ಕøತಿ ಆಚಾರಗಳನ್ನು ಉಳಿಸಿ ಬೇಳೆಸುವಲ್ಲಿ ಮಹಿಳೆಯ ಪಾತ್ರ ಮುಖ್ಯ ಹೀಗಾಗಿ ಕೊಡವ ಜನಾಂಗದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ.ಜಿಲ್ಲೆಯಲ್ಲಿ ಮಹಿಳೆಯರಿಂದ ವಿವಿಧ ಸಾಹಿತ್ಯ ರಚನೆಗೊಂಡಿದೆ. ಕೊಡಗು ಸಾಹಿತ್ಯದ ಗಣಿ ಸಾಹಿತ್ಯ ನೊಂದು ಬೆಂದವರ ಮನಸ್ಸಿಗೆ ಔಷಧಿ ಎಂದು ವಿಶ್ಲೇಷಿಸಿದರು.

ಫೀಲ್ಡ್‍ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಬದುಕು ಮತ್ತು ಸಾಧನೆ ವಿಚಾರ ಮಂಡಿಸಿದ ಪ್ರಗತಿ ಪರ ಚಿಂತಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಪಿ.ಮಾ. ಕಾರ್ಯಪ್ಪ ಜನ್ಮ ದಿನವನ್ನು ಆಚರಿಸಲು ಹೋರಾಟದ ಅಗತ್ಯವಿದೆಯೆ ಕೇವಲ ಎರಡು ದಿವಸದಲ್ಲಿ ಆಚರಣೆಗೆ ಸರ್ಕಾರ ಮುಂದಾಗಿರುವದು. ವಿಷಾದನೀಯ ದೇಶಕ್ಕೆ ಮಾದರಿಯಾದ ಅವರ ಜನ್ಮ ದಿನವನ್ನು ಕಾಟಚಾರಕ್ಕೆ ಆಚರಿಸದೆ ಸರ್ಕಾರದ ಆಚರಣೆಯಾಗಲಿ ಅವರ ವ್ಯಕ್ತಿತ್ವವನ್ನು ನಮ್ಮ ಯುವ ಜನತೆಗೆ ತಿಳಿಯ ಪಡಿಸುವ ಕಾರ್ಯ ಆಗಲಿ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಅತಿಥಿಗಳಾಗಿ ಕಾವೇರಿ ಎಜ್ಯುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಜಮ್ಮಡ ಪೊನ್ನಮ್ಮ ಮಾಚಯ್ಯ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ತಾಲೂಕು ಕ.ಸ.ಪಾ. ಪ್ರಧಾನ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ರೇಖಾ ಶ್ರೀಧರ್ ಉಪಸ್ಥಿತರಿದ್ದರು.

ವರದಿ: ಎನ್.ಎನ್. ದಿನೇಶ್