ಕುಶಾಲನಗರ, ಜ. 28: ಕುಶಾಲನಗರದ ಅಪ್ಪಚ್ಚು ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿರುವ 4ನೇ ವರ್ಷದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಪಂದ್ಯಾಟಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಚಾಲನೆ ನೀಡಿದರು. ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್, ಅಪ್ಪಚ್ಚು ಗೆಳೆಯರ ಬಳಗದ ಪ್ರಮುಖರಾದ ಯತೀಶ್, ಮಣಿ, ಪವನ್, ಕಿಶೋರ್, ಸುರೇಶ್, ಪ್ರದೀಪ್ ಮತ್ತಿತರರು ಇದ್ದರು.