ಕುಶಾಲನಗರ, ಜ. 28: ಕುಶಾಲನಗರದ ಎ.ಆರ್.ಅವಿನಾಶ್ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿನಾಶ್ ಕರ್ನಾಟಕ ತಂಡದ ಶಿಬಿರಕ್ಕೆ ಆಯ್ಕೆಯಾಗಿರುವದಾಗಿ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಡಿ. ಕಪಿಲ್‍ಕುಮಾರ್ ತಿಳಿಸಿದ್ದಾರೆ.
ತಾ. 28 ರಿಂದ ಫೆ 1 ರ ತನಕ ಮಹಾರಾಷ್ಟ್ರದ ರೋಹಾದಲ್ಲಿ 66ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕ ತಂಡ ತೆರಳಿದೆ ಎಂದು ತಿಳಿಸಿರುವ ಅವರು, ಈಗಾಗಲೆ ಭಾರತ ತಂಡವನ್ನು ಪ್ರತಿನಿಧಿಸಿರುವ ಹಾಗೂ ಪ್ರತಿಷ್ಠಿತ ಪ್ರೊ.ಕಬಡ್ಡಿಯಲ್ಲಿ ಭಾಗವಹಿಸಿರುವ ರಾಜ್ಯದ ಕಬಡ್ಡಿ ತಂಡಕ್ಕೆ ಅವಿನಾಶ್ ಸೇರ್ಪಡೆಗೊಂಡಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ್ದಾರೆ. ಅವಿನಾಶ್ ಕುಶಾಲನಗರ ಮುಳ್ಳುಸೋಗೆ ಗ್ರಾಮದ ರಾಜೇಗೌಡ ಮತ್ತು ಪುಷ್ಪ ದಂಪತಿಯ ಪುತ್ರ.