ಶ್ರೀಮಂಗಲ, ಜ. 28: ಹುದಿಕೇರಿ ಗ್ರಾಮ ಪಂಚಾಯಿತಿಯ ಮುಂದಿನ ಅವಧಿಗೆ ನೂತನ ಅಧ್ಯಕ್ಷೆಯÁಗಿ ಕಳÉ್ಳೀಂಗಡ ಸುಧಾರಮೇಶ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆಯÁಗಿದ್ದ ಮತ್ರಂಡ ರೇಖಾ ಪೊನ್ನಪ್ಪ ರಾಜೀನಾಮೆ ನೀಡಿದ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಈ ಆಯ್ಕೆ ನಡೆದಿದೆ. ಚುನವಣಾಧಿಕಾರಿಯಾಗಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಕಾರ್ಯನಿರ್ವಹಿಸಿದರು. ಈ ಸಂದರ್ಭ ನಿರ್ಗಮಿತ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಉಪಾದ್ಯಕ್ಷೆ ಸುನೀತಾ ಮೋಹನ್ ಸದಸ್ಯರುಗಳಾದ ಚಂಗುಲಂಡ ಸೂರಜ್, ಮೀದೇರಿರ ನವೀನ್, ಹೆ.ಆರ್. ಗೊಂಬೆ, ಯಂ. ಬಿಂದು, ಪಿ. ಬೋಜಿ, ಮಲ್ಲಂಗಡ ತಿಮ್ಮಯ್ಯ, ಮಂಡೇಚಂಡ ಹರಿಣಿ, ಮತ್ರಂಡ ಸೋಮಣ್ಣ, ನೂರೆರ ಮನೋಜ್, ಕಾಳು, ಯ. ರವಿ, ಜೆ.ಆರ್. ಗಂಗಮ್ಮ, ಪಿ.ಡಿ.ಒ ಹೆಚ್. ಟಿ. ಸುರೇಶ್, ಹಿರಿಯರಾದ ಚೆಕ್ಕೆರ ವಾಸು ಕುಟ್ಟಪ್ಪ ಹಾಜರಿದ್ದರು.