ಮಡಿಕೇರಿ, ಜ. 29: ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ವತಿಯಿಂದ ನಗರದಲ್ಲಿ ಕಾಡ್ಗಿಚ್ಚು ಹಾಗೂ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯ ಪದಾಧಿಕಾರಿಗಳಾದ ಕೆ.ಎಂ. ಚಿಣ್ಣಪ್ಪ, ಅಚ್ಚಯ್ಯ, ಪ್ರಮೋದ್, ತಮ್ಮು ಪೂವಯ್ಯ ಮೊದಲಾದವರು ಜಾಗೃತಿ ಕಾರ್ಯಕ್ರಮದ ಕರಪತ್ರಗಳನ್ನು ಹಂಚಿದರು.