ನಾಪೆÇೀಕ್ಲು, ಜ. 27: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಪೆÇೀಷಕರು ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸುವದೇ ಮುಖ್ಯವಾಗಿದೆ. ಆದುದರಿಂದ ಪೆÇೀಷಕರು ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ಪ್ರಮುಖ ಪಾತ್ರ ವಹಿಸಬೇಕು ಎಂದು ಮಂಬಾಡ್ ಶಾಖಿರ್ ಬಾಖವಿ ಅಭಿಪ್ರಾಯಪಟ್ಟರು.
ಸಮೀಪದ ಕುಂಜಿಲ ಬದ್ರಿಯಾನಗರದ ರೌಳತುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಕುಂಜಿಲ ಪಯ್ನರಿ ರಿಲೀಫ್ ಫಂಡ್ ವತಿಯಿಂದ ಆಯೋಜಿಸಲಾಗಿದ್ದ ದಿಖ್ರ್ ಹಲ್ಖಾ ಹಾಗೂ 11ನೇ ವಾರ್ಷಿಕ ಅನಾಥ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಎಷ್ಟೆ ಮದರಸಗಳು, ವಿದ್ಯಾಸಂಸ್ಥೆಗಳಿದ್ದರೂ ಮನೆಯಲ್ಲಿ ತಂದೆ, ತಾಯಿಗಳು ನೀಡುವ ವಿದ್ಯೆ ಮಕ್ಕಳಲ್ಲಿ ಮನಮುಟ್ಟುವಂತದ್ದು, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳು ವಂತದ್ದಾಗಿದೆ. ಆದುದರಿಂದ ತಂದೆ, ತಾಯಿಯ ನಡುವೆ ಉಂಟಾಗಬಹುದಂತಹ ಸಣ್ಣ, ಪುಟ್ಟ ಮನಸ್ತಾಪಗಳನ್ನು ಕೂಡ ತಮ್ಮ ಮಕ್ಕಳ ಮುಂದೆ ತೋರ್ಪಡಿಸದೆ ಮಕ್ಕಳಿಗೆ ಉತ್ತಮ ಗುಣ, ನಡತೆಗಳನ್ನು ಹೇಳಿಕೊಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಂಜಿಲ ಪೈಯ್ನರಿ ಜಮಾಅತ್ ಅಧ್ಯಕ್ಷ ಅದವೇಲ್ ಮಹಮ್ಮದ್ ಹಾಜಿ ಕುಂಜಿಲ ‘ಪಯ್ನರಿ’ ರಿಲೀಫ್ ಫಂಡ್ ವತಿಯಿಂದ ಕಳೆದ 11 ವರ್ಷಗಳಲ್ಲಿ 38 ಬಡ ಹೆಣ್ಣು ಮಕ್ಕಳ ವಿವಾಹ ನಡೆಸಲಾಗಿದೆ. ಇದಕ್ಕೆ ಗ್ರಾಮಸ್ಥರು, ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಿರುವದು ಶ್ಲಾಘನೀಯ ಎಂದರು.
ದಿಖ್ರ್ ಹಲ್ಖಾ ಮತ್ತು ದುಆ ಮಜ್ಲಿಸ್ ನೇತೃತ್ವವನ್ನು ಕೂರತ್ ಅಸಯ್ಯಿದ್ ಫಝಲ್ ಕೋಯಮ್ಮ ಅಲ್ಬುಖಾರಿ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆ ಮತ್ತು ನಿಖಾವನ್ನು ಅಸಯ್ಯಿದ್ ಮುಹ್ಸಿನ್ ಸೈದಲವಿ ಕೋಯಾ-ಅಲ್ಬುಖಾರಿ ತಂಙಳ್ ನೆರವೇರಿಸಿದರು.
ವೇದಿಕೆಯಲ್ಲಿ ಅಸಯ್ಯಿದ್ ಮುಹಮ್ಮದ್ ಖಾತಿಂ ಸಖಾಫಿ ಅಲ್ಹೈದರೂಸಿ, ಅಲ್ಹಾಜ್ ಮಹ್ಮೂದ್ ಮುಸ್ಲಿಯಾರ್, ಅಬ್ದುಲ್ಲ ಸಖಾಫಿ, ಅಲ್ಹಾಜ್ ಅಬೂ ಸಈದ್ ಹುಸೈನ್ ಮುಸ್ಲಿಯಾರ್, ಕೊಳಕೇರಿ ಜಮಾಅತ್ ಅಧ್ಯಕ್ಷ ಟಿ.ಹೆಚ್. ಅಹಮ್ಮದ್, ಕುಂಡಂಡ ಎ. ಅಬೂಬಕ್ಕರ್ ಸಫಾ, ಕುಂಡಂಡ ಡ. ಅಬ್ದುರ್ರಝಾಖ್, ಪುದರೆಲ್ ಅಹ್ಮದ್ ಹಾಜಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಕಾರಂಗೋಟ್ ಅಬ್ದುಲ್ ರಹಿಮಾನ್ ಇದ್ದರು.
ಹಾರಿಸ್ ಝೈನಿ ಸ್ವಾಗತಿಸಿ, ಫೈಜûಲ್ ಜೌಹಾರಿ ವಂದಿಸಿದರು.