ಗೋಣಿಕೊಪ್ಪಲು, ಜ. 27: ಕೊಡಗಿನ ರೈತಾಪಿ ವರ್ಗ ಅನಾವೃಷ್ಠಿ ಹಾಗೂ ಕಳೆದ ವರ್ಷ ಅತಿವೃಷ್ಠಿಯಿಂದ ತತ್ತರಿಸಿದ್ದು ವಾಣಿಜ್ಯ ಬೆಳೆಗಳೂ ಒಳಗೊಂಡಂತೆ ಭತ್ತ ಇತ್ಯಾದಿ ಕೃಷಿಯಲ್ಲಿಯೂ ನಷ್ಟ ಹೊಂದುತ್ತಿದ್ದಾರೆ. ಈ ನಡುವೆ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಹುಲ್ಲು ಸಾಗಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿರುವದು ಸರಿಯಲ್ಲ ಎಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‍ದೇವಯ್ಯ ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯ ರೈತಾಪಿ ವರ್ಗ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತಾವು ಬೆಳೆದ ಹುಲ್ಲನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆಂದು ಸತೀಶ್‍ದೇವಯ್ಯ ಒತ್ತಾಯಿಸಿದ್ದಾರೆ.