ಸೋಮವಾರಪೇಟೆ, ಜ. 27: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೀಡಾಗಿದ್ದ ಮಾದಾಪುರ ಕಲ್ಲುಕೋರೆ ಶ್ರೀಚೌಂಡಿಯಮ್ಮ ಮತ್ತು ಶ್ರೀ ಗುಳಿಗಪ್ಪ ದೈವಸ್ಥಾನವನ್ನು ಹಿಂದೂ ಜಾಗರಣಾ ವೇದಿಕೆ ಮತ್ತು ಬೆಂಗಳೂರಿನ ಪರಿವರ್ತನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಗೊಳಿಸಲಾಗಿದ್ದು, ನೂತನ ದೇವಾಲಯದ ಲೋಕಾರ್ಪಣೆ ಇಂದು ನಡೆಯಿತು.ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖಾ ರಾಜ್ಯ ಸಚಿವ ಅನಂತ್‍ಕುಮಾರ್ ಹೆಗಡೆ, ಕೇರಳದ ಹಿಂದೂ ಐಕ್ಯವೇದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಬ್ರಹ್ಮಚಾರಿ ಭಾರ್ಗವರಾವ್, ಹಿಂದೂ ಜಾಗರಣಾ ವೇದಿಕೆಯ ಜಗದೀಶ್ ಕಾರಂತ್ ಸೇರಿದಂತೆ ಇತರ ಪ್ರಮುಖರು ನೂತನ ದೇವಾಲಯದ ಲೋಕಾರ್ಪಣೆ ಕಾರ್ಯದಲ್ಲಿ ಭಾಗಿಯಾದರು.ನೂತನವಾಗಿ ಜೀರ್ಣೋದ್ಧಾರ ಗೊಂಡಿರುವ ಕಲ್ಲುಕೋರೆ ಶ್ರೀಚೌಂಡಿಯಮ್ಮ ಮತ್ತು ಶ್ರೀ ಗುಳಿಗಪ್ಪ ದೈವಸ್ಥಾನದಲ್ಲಿ ನಿನ್ನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ,ಸುದರ್ಶನ ಹೋಮ, ದೇವಿ ಪೂಜೆ, ಮಂಗಳಪೂಜೆ ನಡೆದಿದ್ದು, ಇಂದು ಬೆಳಗ್ಗೆ ಗಣಪತಿ ಹೋಮ, ಶ್ರೀದೇವಿ ಹಾಗೂ ದೈವದ ಪ್ರತಿಷ್ಠಾಪನೆಯೊಂದಿಗೆ ದೇವಿಪೂಜೆ ನೆರವೇರಿತು.

ಮೆರವಣಿಗೆ: ದೇವಾಲಯ ಲೋಕಾರ್ಪಣೆ ನಂತರ ಕಲ್ಲುಕೋರೆ ಚೌಂಡಿಯಮ್ಮ ದೇವಾಲಯದಿಂದ ಸುಮಾರು 3 ಕಿ.ಮೀ. ದೂರದ ಮಾದಾಪುರದವರೆಗೆ ಭವ್ಯ ಮೆರವಣಿಗೆ ನಡೆಯಿತು. ಗ್ರಾಮದ ಮಹಿಳೆಯರು ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರು ಕೇಸರಿ ಶಲ್ಯ, ಪೇಟ ಧರಿಸಿ ‘ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಮ್..’ಘೋಷಣೆಗಳನ್ನು ಮೊಳಗಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಶ್ರೀರಾಮನ ಬೃಹತ್ ಚಿತ್ರಪಟದ

(ಮೊದಲ ಪುಟದಿಂದ) ಮೆರವಣಿಗೆ ಎಸ್‍ಜೆಎಂ ಶಾಲಾ ಮೈದಾನದವರೆಗೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.