ಮಡಿಕೇರಿ, ಜ. 27: ಆಧುನಿಕ ಶೈಲಿಯ ಜೀವನಕ್ಕೆ ಮಾರುಹೋಗುತ್ತಿ ರುವ ಯುವಜನತೆ ಮಾದಕ ವ್ಯಸನಗಳಿಗೆ ತುತ್ತಾಗುತ್ತಿರುವದು ಅತ್ಯಂತ ಆತಂಕಕಾರಿ ಬೆಳವಣಿಗೆ ಯಾಗಿದ್ದು, ಯುವ ಸಂಘಟನೆಗಳು ಯುವ ಸಮೂಹಕ್ಕೆ ಮಾರ್ಗದರ್ಶನ ನೀಡುವ ಮತ್ತು ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕೆಂದು ಮಡಿಕೇರಿ ತಾ.ಪಂ. ಸದಸ್ಯ ಕೊಡಪಾಲು ಗಣಪತಿ ಕರೆ ನೀಡಿದ್ದಾರೆ.
ತಾಳತ್ತಮನೆಯಲ್ಲಿ ಜರುಗಿದ ಸುಭಾಷ್ ಚಂದ್ರ ಬೋಸರ 122ನೇ ಜನ್ಮ ದಿನಾಚರಣೆ ಮತ್ತು ನೇತಾಜಿ ಯುವಕ ಹಾಗೂ ಯುವತಿ ಮಂಡಲದ 27ನೇ ವಾರ್ಷಿಕೋತ್ಸವ ಮದೆ ಮಹೇಶ್ವರ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಜನಾರ್ಧನ ಮಾತನಾಡಿ, ಯುವ ಜನರು ನೈತಿಕತೆಯೊಂದಿಗೆ ಆತ್ಮಸ್ಥೈರ್ಯವನ್ನು ಮೈಗೂಡಿಸಿ ಕೊಳ್ಳಬೇಕು ಮತ್ತು ನಿರ್ದಿಷ್ಟ ಗುರಿ ಸಾಧಿಸುವ ಛಲವನ್ನು ಹೊಂದಬೇಕು ಎಂದರು. ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಮಾತನಾಡಿದರು.
ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರನ್ನು ರಕ್ಷಿಸಿದ ಕಗ್ಗೋಡ್ಲುವಿನ ನಾಗೇಶ್, ನವೀನ್, ತಾಳತ್ತಮನೆಯ ಕೆ.ಕೆ.ಗಣೇಶ್, ಸಚಿನ್ ಡಿಸೋಜ, ಬಿ.ಎಸ್.ಪವನ್ ರೈ ಹಾಗೂ ಡಿ.ಪಿ. ತಿಮ್ಮಯ್ಯ ಗೌರವಿಸಲಾಯಿತು. ದಿನದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಬಿ.ಬಿ. ದಿವೇಶ್ ರೈ ಸ್ವಾಗತಿಸಿ, ಗಿರೀಶ್ ತಾಳತ್ತಮನೆ ನಿರೂಪಿಸಿದರು. ಮಡಿಕೇರಿಯ ಶ್ರೀಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಬಿ. ಸತ್ಯೇಷ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಅಶೋಕ ಫೌಂಡೇಶನ್ ವ್ಯವಸ್ಥಾಪಕ ಬಿ.ಕೆ. ಬಾಲಕೃಷ್ಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿಯ ಡಿ.ಇ.ಒ. ಕೆ.ಪಿ. ಕಾರ್ಯಪ್ಪ, ಸ್ಥಳೀಯ ಬೆಳೆಗಾರ ಕಟ್ರತನ ಅನಂತಲಕ್ಷಿ ಶಿವರಾಮ್ ಉಪಸ್ಥಿತರಿ ದ್ದರು. ಅಧ್ಯಕ್ಷತೆಯನ್ನು ಮದೆನಾಡು ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್. ರತ್ನ ವಹಿಸಿದ್ದರು.
ವಿಜೇತರು: ಜಿಲ್ಲಾ ಮಟ್ಟದ ಮುಕ್ತ ವಾಲಿಬಾಲ್ನಲ್ಲಿ ಮೂರ್ನಾಡಿನ ಗೌತಮ್ ಫ್ರೆಂಡ್ಸ್ ಪ್ರಥಮ, ಮಡಿಕೇರಿಯ ಸಮುದ್ರ ಫ್ರೆಂಡ್ಸ್ ದ್ವೀತಿಯ ಸ್ಥಾನ ಪಡೆದರು.
ಮಹಿಳಾ ಥ್ರೋಬಾಲ್ ಪಂದ್ಯಾವಳಿಯಲ್ಲಿ ಅತಿಥೇಯ ನೇತಾಜಿ ಯುವತಿ ಮಂಡಳಿ ಎರಡೂ ಸ್ಥಾನಗಳನ್ನು ಪಡೆದುಕೊಂಡಿದೆ.
ಪುರಷರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಶಿರಂಗಾಲದ ಶ್ರೀಧರ್ ಪ್ರಥಮ, ಭಾಗಮಂಡಲದ ಕೋಡಿ ಜೀತನ್ ದ್ವೀತಿಯ, ಶಿರಂಗಾಲದ ಸುರೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳಾ ವಿಭಾಗದ ಗುಡ್ಡಗಾಡು ಓಟದಲ್ಲಿ ಮುಕ್ಕಾಟಿರ ಸುಧಾ ಕಿರಣ್ ಪ್ರಥಮ, ಅಚ್ಚಂಡ ಮಧುರ ಕುಮಾರಿ ದ್ವೀತಿಯ, ಅವಂದೂರಿನ ಅಂಚೆಮನೆ ಜಯಂತಿ ಲೋಕೇಶ್ ತೃತೀಯ ಸ್ಥಾನ ಪಡೆದರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಮಿನಿ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಕುಶಾಲನಗರದ ಕೆ.ಎಂ.ವಿಷ್ಣು ಪ್ರಥಮ, ಅವಂದೂರಿನ ಎ.ಎಸ್. ಕುಶನ್ ದ್ವೀತಿಯ, ಮೇಕೇರಿಯ ಸಿ.ಹೆಚ್.ಅಭಿಷೇಕ್ ತೃತೀಯ ಸ್ಥಾನ ಪಡೆದರು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.