ಚೆಟ್ಟಳ್ಳಿ, ಜ. 27: ಕಳೆದ ಮಳೆಗಾಲದಲ್ಲಿ ಚೆಟ್ಟಳ್ಳಿ ಸಮೀಪವಿರುವ ಕಂಡಕೆರೆ ಬಸ್ ತಂಗುದಾಣಕ್ಕೆ ಮರವೊಂದು ಉರುಳಿ ತಂಗುದಾಣವು ನೆಲಕಚ್ಚಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮತ್ತು ಮಕ್ಕಳು ತಮ್ಮ ದಿನನಿತ್ಯದ ವ್ಯವಹಾರಕ್ಕೆ ತೆರಳಲು ಈ ಬಸ್ ತಂಗುದಾಣವನ್ನು ಅವಲಂಭಿಸಿದ್ದರು. ಅದಕ್ಕೆ ಕಾಯಕಲ್ಪ ನೀಡಲು ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ತಮ್ಮ ಅನುದಾನದಿಂದ ರೂ. 2 ಲಕ್ಷ ಹಣವನ್ನು ಮೀಸಲಿಟ್ಟು ಭೂಮಿಪೂಜೆ ನೆರೆವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭ ಚೆಟ್ಟಳ್ಳಿ ಕಾಂಗ್ರೆಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಪಂಚಾಯಿತಿ ಮಾಜಿ ಅಧ್ಯಕ್ಷ ತೀರ್ಥಕುಮಾರ್, ಹಾಲಿ ಸದಸ್ಯರಾದ ಮೊಹಮದ್ ರಫಿ, ಸಿಂಧೂ ಮುಂತಾದವರು ಹಾಜರಿದ್ದರು.
ಅಲ್ಲದೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕಂಡಕರೆ ಕಾಂಕ್ರಿಟ್ ರಸ್ತೆ 2.33 ಲಕ್ಷ, ಕೂಡ್ಲೂರು ಚೆಟ್ಟಳ್ಳಿ ಪೈಸಾರಿ ರಸ್ತೆ 2 ಲಕ್ಷ, ಕೂಡ್ಲೂರು-ಚೆಟ್ಟಳ್ಳಿ ಕರ್ಣಯ್ಯನ ಕುಟುಂಬಸ್ಥರ ರಸ್ತೆ 2 ಲಕ್ಷ, ಬಕ್ಕಾ-ಬ್ಯಾರಂಗಿ, ರಸ್ತೆ 2 ಲಕ್ಷ, ಕಂಡಕರೆಯಿಂದ ವಾಲ್ನೂರುವರೆಗೆ ರಸ್ತೆ ಡಾಂಬರೀಕರಣ 9 ಲಕ್ಷ, ಚೇರಳ ಕಂಡಕರೆ ಕೆರೆ ರಸ್ತೆ ಅಭಿವೃದ್ಧಿ 2.30 ಲಕ್ಷ, ವಾಲ್ನೂರು ಗ್ರಾಮದಲ್ಲಿ ಪೈಪ್ಲೈನ್ ವಿಸ್ತರಣೆ 2 ಲಕ್ಷ, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ 4 ಸೋಲಾರ್ ಅಳವಡಿಕೆ 1.20 ಲಕ್ಷ, ಅಭ್ಯತ್ಮಂಗಲ ಶಾಲೆಯ ಮೈದಾನ ಅಭಿವೃದ್ಧಿಗೆ 3 ಲಕ್ಷದ ಕಾಮಗಾರಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಮಾಹಿತಿ ನೀಡಿದ್ದಾರೆ.