ಸೋಮವಾರಪೇಟೆ, ಜ. 25: ನಡೆದಾಡುವ ದೇವರೆಂದೇ ಕರೆಯಲ್ಪಡುತ್ತಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕುರಿತು ಬೆಂಗಳೂರಿನ ಶಾರದ ಪ್ರತಿಷ್ಠಾನ ಮತ್ತು ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗದಿಂದ ಸ್ಮರಣ ಸಂಚಿಕೆ ಹೊರತರಲು ತೀರ್ಮಾನಿಸಲಾಗಿದೆ ಎಂದು ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕಾ ಕಾಳಪ್ಪ ತಿಳಿಸಿದ್ದಾರೆ. ಸ್ಮರಣ ಸಂಚಿಕೆಗೆ ಶಿವಕುಮಾರ ಸ್ವಾಮೀಜಿ ಅವರ ಕುರಿತ ಲೇಖನ ಮತ್ತು ಕವನಗಳನ್ನು ಆಹ್ವಾನಿಸಲಾಗಿದ್ದು, ಫೆ. 20 ರೊಳಗೆ ಎಸ್.ಕೆ. ರಾಧಿಕಾ ಕಾಳಪ್ಪ, ತಲ್ತರೆಶೆಟ್ಟಳ್ಳಿ ಗ್ರಾಮ, ಹಾನಗಲ್ಲು ಅಂಚೆ, ಸೋಮವಾರಪೇಟೆ, ಕೊಡಗು ಜಿಲ್ಲೆ-571236 ಇಲ್ಲಿಗೆ ಕಳುಹಿಸಿಕೊಡಬೇಕಿದೆ.

ಎರಡು ಪುಟಗಳ ಮಿತಿಯಲ್ಲಿ ಲೇಖನ ಮತ್ತು ಇಪ್ಪತ್ತು ಸಾಲುಗಳ ಮಿತಿಯಲ್ಲಿ ಕವನಗಳನ್ನು ಕಳುಹಿಸಿಕೊಡಬೇಕಿದ್ದು, ಹೆಚ್ಚಿನ ಮಾಹಿತಿಗೆ ಮೊ: 9481851475 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.