ಮಡಿಕೇರಿ, ಜ. 26: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ (ನಿಮಾ)ನ ಕೊಡಗು ಜಿಲ್ಲಾ ಶಾಖೆ ಇತ್ತೀಚೆಗೆ ಮಡಿಕೇರಿಯ ತ್ಯಾಗರಾಜ ಕಾಲೋನಿಯ ಪರಿತ್ಯಕ್ತ ವಿಶೇಷಚೇತನರ ವಿಶ್ರಾಂತಿ ಗೃಹ - ತನಲ್ ಕೂರ್ಗ್‍ನಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಿತ್ತು.
ಈ ಸಂದರ್ಭ ನಿಮಾ ಜಿಲ್ಲಾಧ್ಯಕ್ಷ ಡಾ. ರಾಜಾರಾಮ್, ಕಾರ್ಯದರ್ಶಿ ಡಾ. ಕುಲಕರ್ಣಿ, ಡಾ. ಜ್ಯೋತಿ ರಾಜಾರಾಮ್ ಮತ್ತು ಡಾ. ಉದಯ ಶಂಕರ್ ಭಾಗವಹಿಸಿ ರಕ್ತ ಪರೀಕ್ಷೆ ನಡೆಸಿ, ಆಯುರ್ವೇದ ಚಿಕಿತ್ಸೆ ಮತ್ತು ಆರೋಗ್ಯ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು.