ಚೆಟ್ಟಳ್ಳಿ, ಜ. 26 : ಇಲ್ಲಿನ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೆ.ಕೆ.ಎಫ್.ಸಿ ಕಾಲ್ಚೆಂಡು ಪಂದ್ಯಾಟದಲ್ಲಿ ಬಿ.ಎಫ್.ಸಿ. ಕುಂದಾ, ಅಂಬೇಡ್ಕರ್ ಅಮ್ಮತ್ತಿ, ವಿಜಯನಗರ ಎಫ್.ಸಿ , ಸಿ.ಸಿ.ಎಫ್.ಸಿ. ಕಾಫಿ ಬೋರ್ಡ್ ತಂಡಗಳು ಸೆಮಿಫೈನಲ್‍ಗೆ ಅರ್ಹತೆ ಪಡೆದಿವೆ.
ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜಯನಗರ ಎಫ್.ಸಿ ತಂಡವು ಯಂಗ್ ಸ್ಟಾರ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 5-4ಗೋಲುಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಂಬೇಡ್ಕರ್ ಅಮ್ಮತ್ತಿ ತಂಡವು 4-3 ಶೂಟೌಟ್‍ನಲ್ಲಿ ನೆಹರು ಎಫ್.ಸಿ ಪಾಲಿಬೆಟ್ಟ ತಂಡವನ್ನು ಮಣಿಸಿತು.
ಮೂರನೇ ಪಂದ್ಯದಲ್ಲಿ ನೈಜೀರಿಯ ಆಟಗಾರರನ್ನು ಒಳಗೊಂಡ ಬಿ.ಎಫ್.ಸಿ ಕುಂದಾ ತಂಡವು ನೆಹರು ಎಫ್.ಸಿ ತಂಡವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿತು.
ಮಿಲನ್ ಬಾಯ್ಸ್ ಅಮ್ಮತ್ತಿ ತಂಡವನ್ನು ಸಿ.ಸಿ.ಎಫ್. ತಂಡವು 2-0 ಗೋಲುಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.