*ಸಿದ್ದಾಪುರ, ಜ. 26: ದುಷ್ಕರ್ಮಿಗಳು ಕಾಫಿ ತೋಟದಲ್ಲಿ ಫಸಲು ಹಿಡಿದ ಕರಿಮೆಣಸು ಬಳಿಯನ್ನು ಕತ್ತಿಯಿಂದ ಕಡಿದು ನಾಶಗೊಳಿಸಿದ ಕುರಿತು ಸಿದ್ದಾಪುರ ಪೊಲೀಸರಿಗೆ ಪುಕಾರಾಗಿದೆ.
ವಾಲ್ನೂರು ಗ್ರಾಮದ ಕಾಫಿ ಬೆಳೆಗಾರ ದೇವಿಲಾಲ್ ಆಲಿಯಾಸ್ ದಾದಾ ಅವರ ಕಾಫಿ ತೋಟದಲ್ಲಿದ್ದ 3 ಕರಿಮೆಣಸಿನ ಬಳಿಯನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ನಾಶಗೊಳಿಸಿದ್ದು, ಅಂದಾಜು 80 ಕೆ.ಜಿ. ಕರಿಮೆಣಸು ನಷ್ಟವಾಗಿದೆ ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ.