*ಮೂರ್ನಾಡು, ಜ. 25: ಸ್ಥಳೀಯ ಮಾರುತಿ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವು ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಸ್ವಪ್ನ ಸುಬ್ಬಯ್ಯ ನೇತೃತ್ವದಲ್ಲಿ ನಡೆಯಿತು.

ತೀರ್ಪುಗಾರರಾಗಿ ಮೂರ್ನಾಡು ವಿದ್ಯಾಸಂಸ್ಥೆಯ ಉಪನ್ಯಾಸಕ ರವಿಶಂಕರ್ ಹಾಗೂ ವೀರಾಜಪೇಟೆ ಕಾವೇರಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ವಿನೋದ್ ಹಾಜರಿದ್ದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ. ಅಪ್ಪಚ್ಚು, ಕಾರ್ಯದರ್ಶಿ ಸಿ.ಜಿ. ದೇವಯ್ಯ, ಉಪಾಧ್ಯಕ್ಷ ಬಿ. ಅರುಣ್ ಅಪ್ಪಚ್ಚು ಹಾಗೂ ನೀಲಮ್ಮ ಮುತ್ತಣ್ಣ, ಲೀಲಾ ಗಣಪತಿ, ಕನ್ನು ಅಪ್ಪಚ್ಚು, ಶೋಭಾ ಪ್ರೀತಮ್ ಹಾಜರಿದ್ದರು.