ಮಡಿಕೇರಿ, ಜ. 26: ನವದೆಹಲಿಯಲ್ಲಿನ ಗಣರಾಜ್ಯೋತ್ಸವ ಪೆರೇಡ್‍ಗೆ ಆಯ್ಕೆಯಾಗಿ ಕರ್ನಾಟಕ - ಗೋವಾ ಡೈರೆಕ್ಟರೇಟ್‍ನ ಮೂಲಕ ತೆರಳಿರುವ ಎನ್.ಸಿ.ಸಿ. ಕೆಡೆಟ್ ದಿಯಾ ಡಿಸೋಜ ಈ ಸಾಧನೆ ಯೊಂದಿಗೆ ಈ ಬಾರಿ ತಾ. 28ರಂದು ನಡೆಯಲಿರುವ ಪ್ರಧಾನಮಂತ್ರಿಗಳ ಗಾರ್ಡ್ ಆಫ್ ಹಾನರ್ ತಂಡಕ್ಕೂ ಆಯ್ಕೆಯಾಗಿದ್ದಾಳೆ. ಮೂಲತಃ ಜಿಲ್ಲೆಯವರಾದ ದಿಯಾ ಡಿಸೋಜ ಮಡಿಕೇರಿಯ ಸಂತ ಜೋಸೆಫರ ಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದು, ಇದೀಗ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ಎನ್.ಸಿ.ಸಿ. ಕೆಡೆಟ್ ಆಗಿದ್ದಾಳೆ.ಪ್ರಸ್ತುತ ನವದೆಹಲಿಯಲ್ಲಿನ ಫೀ.ಮಾ.ಕೆ.ಎಂ. ಕಾರ್ಯಪ್ಪ ಪೆರೇಡ್ ಗ್ರೌಂಡ್‍ನ ಡಿ.ಜಿ.ಎನ್.ಸಿ.ಸಿ.ಯಲ್ಲಿರುವ ಈಕೆ ತಾ. 28ರಂದು ನಡೆಯುವ ಪ್ರೈಮಿನಿಸ್ಟರ್ ರ್ಯಾಲಿಯ ಗಾರ್ಡ್ ಆಫ್ ಹಾನರ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಸೀನಿಯರ್ ವಿಂಗ್ ಕೆಡೆಟ್ ಆಗಿರುವ ದಿಯಾ ಕರ್ನಾಟಕ ಆರ್ಮ್‍ಡ್ ಸ್ಕ್ವಾಡ್ ವಿಭಾಗದ ಮೂಲಕ ಈ ತಂಡಕ್ಕೆ ಆಯ್ಕೆ ಯಾಗಿರುವ ಕೆಡೆಟ್ ಆಗಿದ್ದು, ತಾ. 28ರ ರ್ಯಾಲಿಯಲ್ಲಿ ಅತಿಥಿ ಗಣ್ಯರಿಗೆ ಗೌರವ ರಕ್ಷೆ ನೀಡುವ ಅವಕಾಶ ಪಡೆದಿದ್ದಾಳೆ. ಈಕೆ ತಾಳತ್‍ಮನೆಯ ನಿವಾಸಿ ಟಾಮ್ ಡಿಸೋಜ ಹಾಗೂ ಸಂತ ಜೋಸೆಫರ ಶಾಲೆಯ ಶಿಕ್ಷಕಿ ಸರಿತಾ ಅವರ ಪುತ್ರಿಯಾಗಿದ್ದಾಳೆ.