ಮಡಿಕೇರಿ, ಜ. 25: ಕೊಡಗು ಜಿಲ್ಲಾ ನಿವೃತ್ತ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಎಂ. ಉಮ್ಮರ್, ಉಪಾಧ್ಯಕ್ಷರಾಗಿ ಎನ್.ಡಿ. ಚರ್ಮಣ, ಕಾರ್ಯದರ್ಶಿಯಾಗಿ ಪಿ.ಸಿ. ಮದುರಯ್ಯ ಆಯ್ಕೆಗೊಂಡಿದ್ದಾರೆ.

ಖಜಾಂಚಿಯಾಗಿ ಜೆ.ಎಸ್. ವಿಲ್ಲಿಯಮ್ಸ್, ಸಹಾಯಕ ಕಾರ್ಯದರ್ಶಿಯಾಗಿ ಎಂ.ವೈ. ನಿಸಾರ್ ಅಹ್ಮದ್ ಆಯ್ಕೆಗೊಂಡಿದ್ದು, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಜಿ.ಎ. ಚಾಮಿ, ಟಿ.ಎ. ರಾಮಚಂದ್ರ, ಜಿ.ಪಿ. ಗೋಪಾಲ, ಜೆ.ಎ. ಚಿನ್ನಣ್ಣ ಹಾಗೂ ಎಂ.ಕೆ. ರಾಘವನ್ ಆಯ್ಕೆಗೊಂಡಿದ್ದಾರೆ. ಸಂಘದ ವಾರ್ಷಿಕ ಸಭೆ ಇತ್ತೀಚೆಗೆ ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್‍ನಲ್ಲಿ ಅಧ್ಯಕ್ಷ ಎಂ. ಉಮ್ಮರ್ ಅವರ ಅಧ್ಯಕ್ಷತೆಯಲ್ಲಿ ನಡೆದು ಉಂದಿನ 5 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.