ಮಡಿಕೇರಿ, ಜ. 23: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮೀಜಿ ನಿಧನರಾದ ಹಿನ್ನೆಲೆ ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ‘ಶ್ರದ್ಧಾಂಜಲಿ’ ಸಭೆ ನಡೆಯಿತು.

ಪತ್ರಿಕಾ ಭವನ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ವಿದ್ಯಾದಾನದ ಮೂಲಕ ಶ್ರೀ.ಡಾ. ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗೆಯನ್ನು ಜ್ಞಾನ ಗಂಗೆಯನ್ನಾಗಿಸಿ ಮಹಾಮಹಿಮರಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ, ಸಮಾಜ ಸೇವಕ ಕೆ.ಟಿ. ಬೇಬಿ ಮ್ಯಾಥ್ಯು, ಬಳಗದ ಪದಾಧಿಕಾರಿ ಬಿ.ಎ. ಷಂಶುದ್ದೀನ್, ಉಪನ್ಯಾಸಕಿ ಡಾ. ಅವನಿಜ ಸೋಮಯ್ಯ, ಅಲ್ಲಾರಂಡ ರಂಗ ಚಾವಡಿಯ ಪ್ರಮುಖ ಅಲ್ಲಾರಂಡ ವಿಠಲ ನಂಜಪ್ಪ ಅವರುಗಳು ಮಾತನಾಡಿದರು.

ಸಭೆÉಯಲ್ಲಿ ಬಳಗದ ಸದಸ್ಯರುಗಳಾದ ಲಿಯಾಕತ್ ಆಲಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಟ್ರಸ್ಟಿ ಕೆ. ತಿಮ್ಮಪ್ಪ, ಪತ್ರಕರ್ತರುಗಳಾದ ವಿಘ್ನೇಶ್ ಭೂತನಕಾಡು, ರಾಕೆÉೀಶ್, ಉದಯ್ ಮೊಣ್ಣಪ್ಪ, ರವಿ, ಪ್ರಸಾದ್ ಸಂಪಿಗೆ ಕಟ್ಟೆ, ಮೋಹನ್, ವಿಕಾಸ್, ಲೋಹಿತ್, ಜಯಂತಿ, ವಿಶ್ಮ ಮೊದಲಾದವರು ಪಾಲ್ಗೊಂಡಿದ್ದರು.

ಮೂರ್ನಾಡು: ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ದಗಂಗಾ ಮಠದ ಪೀಠಾಧೀಶರಾದ ಡಾ. ಶಿವಕುಮಾರ ಮಹಾಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಸೇರಿ ಅಗಲಿದ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭ ಮಾತನಾಡಿದ ಕಾಲೇಜಿನ ಉಪನ್ಯಾಸಕ ಹರೀಶ್ ಅವರು ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಗ್ರಾಮೀಣ ಮತ್ತು ಬಡವರ ಮನೆಗಳ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಮಹತ್ವವಾದ ಧ್ಯೇಯ ಮತ್ತು ಗುರಿಯನ್ನು ಮುಟ್ಟುವಲ್ಲಿ ಸ್ವಾಮೀಜಿಯವರು ಯಶಸ್ವಿಯಾಗಿದ್ದರೆ. ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಅಪಾರ ಸೇವೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ ನಡೆದಾಡುವ ದೇವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.