ಸೋಮವಾರಪೇಟೆ, ಜ. 24: ಇಲ್ಲಿಗೆ ಸಮೀಪದ ಐಗೂರು ಸರಕಾರಿ ಪ್ರೌಢಶಾಲೆಯ ಗ್ರಾಹಕರ ಕ್ಲಬ್ ವತಿಯಿಂದ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಶಾಲಾ ಮಕ್ಕಳು ತರಕಾರಿ, ಹಣ್ಣು ಹಂಪಲು ಗಳನ್ನು ಮಾರಾಟ ಮಾಡಿದರು. ಪೋಷಕರು ಮತ್ತು ಶಿಕ್ಷಕರು ಖರೀದಿ ಮಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮುಖ್ಯ ಶಿಕ್ಷಕ ಯಶವಂತ್ ಕುಮಾರ್, ಸಹಶಿಕ್ಷಕರಾದ ಅನಿತಾ, ರಂಜಿನಿ, ರಾಜರತ್ನ, ಸುಮಂತಾ ಇದ್ದರು.