ವೀರಾಜಪೇಟೆ, ಜ. 22: ವೀರಾಜಪೇಟೆಯ ಶತಮಾನಗಳ ಹಿಂದಿನ ಸಂತ ಅನ್ನಮ್ಮ ದೇವಾಲಯದ 225ನೇ ವರ್ಷಗಳ ಸ್ಮರಣಾರ್ಥ ‘ಪ್ಯಾರಿಶ್ ಡೇ’ ಆಚರಿಸುವಂತೆ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಇಲ್ಲಿನ ಸಂತ ಅನ್ನಮ್ಮ ದೇವಾಲಯದಲ್ಲಿ ಧರ್ಮ ಕೇಂದ್ರದ ಹಿರಿಯ ಗುರುಗಳಾದ ರೆ.ಫಾ. ಮದಲೈಮುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಪ್ಯಾರಿಶ್ ಡೇ ಪ್ರಯುಕ್ತ ತಾ. 27ರಂದು ಎಲ್ಲ ಕ್ರೈಸ್ತಬಾಂಧವರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲು ಸಭೆ ನಿರ್ಧರಿಸಿತು. ಸಲಹಾ ಸಮಿತಿ ಸಭೆಯಲ್ಲಿ ಸಹಾಯಕ ಗುರುಗಳು, ಇಲ್ಲಿನ ಕಾನ್ವೆಂಟಿನ ಕನ್ಯಾಸ್ತ್ರೀಯರು, ಕಾರ್ಯದರ್ಶಿ ಬೆನ್‍ಡಿಕ್ಟ್ ಸಾಲ್ಡಾನ ಹಾಗೂ ಸಲಹಾ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.