ಮಡಿಕೇರಿ, ಜ. 22: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗಾಳಿಬೀಡು ಯುವಕ ಸಂಘದ ವತಿಯಿಂದ ಗಾಳಿಬೀಡಿನ ಸ.ಮಾ.ಪ್ರಾ.ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಅಶೋಕಪುರದ ಸಂತೋಷ್ ಯುವಕ ಸಂಘ ಕೋಲಾಟ, ಜಾನಪದ ಗೀತೆ ಹಾಗೂ ಗೀಗೀ ಪದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದೆ. ಭಜನೆಯಲ್ಲೂ ತೃತೀಯ ಸ್ಥಾನ ಪಡೆದುಕೊಂಡಿರುವ ಸಂತೋಷ್ ಯುವಕ ಸಂಘ, ಅಧ್ಯಕ್ಷ ಅವಿನ್‍ಕುಮಾರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ.