ಗೋಣಿಕೊಪ್ಪಲು, ಜ. 22: ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿಯಿಂದಾಗಿ ಪೆÇನ್ನಂಪೇಟೆ-ಕಾನೂರು-ನಾಲ್ಕೇರಿ-ಕುಟ್ಟ ರಸ್ತೆ ಭಾರೀ ಹೊಂಡಗಳಾಗಿ ಮಾರ್ಪಟ್ಟಿದ್ದು, ಕೂಡಲೇ ಗುಂಡಿ ಮುಚ್ಚುವದಲ್ಲದೆ ಪೆÇನ್ನಂಪೇಟೆಯಿಂದ ಆರಂಭಗೊಂಡು ಸ್ಥಗಿತಗೊಂಡಿರುವ ಮುಖ್ಯರಸ್ತೆ ಮರುಡಾಂಬರೀಕರಣವನ್ನು ಪುನರಾರಂಭಿಸುವಂತೆ ಜಿ.ಪಂ.ಸದಸ್ಯ ಬಾನಂಡ ಪ್ರಥ್ಯು ಆಗ್ರಹಿಸಿದ್ದಾರೆ.ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಲು 10 ದಿನಗಳ ಗಡವು ನೀಡಲಾಗಿದ್ದು, ಸಂಬಂದಿಸಿದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಲ್ಲಿ ಈ ಭಾಗದ ಗ್ರಾಮಸ್ಥರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಈ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ ಸಂದರ್ಭ ತೀವ್ರ ಕಳಪೆ ಕಾಮಗಾರಿ ವಿರುದ್ಧ ಕುಟ್ಟ-ನಾಲ್ಕೇರಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ರಸ್ತೆಯ ಗುಣಮಟ್ಟದ ಕಾಮಗಾರಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪೃಥ್ಯು ತಿಳಿಸಿದ್ದಾರೆ.

ಪಿಡಬ್ಲ್ಯೂಡಿ ಅಧಿಕಾರಿ ವರ್ಗದಲ್ಲಿ ಹಲವು ಬಾರಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ ಮಾಡಿದರೂ ನಿರ್ಲಕ್ಷ್ಯವಹಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.