ಪೊನ್ನಂಪೇm,É ಜ. 22 : ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಅಂಬಟ್ಟಿ ಮಖಾಂ ಉರೂಸ್ ತಾ. 25ರಿಂದ 28 ರವರೆಗೆ ಜರುಗಲಿದೆ. ವರ್ಷಂಪ್ರತಿ ನಡೆಯುವ ಮಖಾಂ ಉರೂಸ್ ಈ ಬಾರಿ 4 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ತಾ. 25 ರಂದು ಜುಮಾ ನಮಾಜ್ ಮತ್ತು ಮಖಾಂ ಅಲಂಕಾರದ ಬಳಿಕ ಅಂಬಟ್ಟಿ ಮಖಾಂ ಜಮಾಅತ್ತಿನ ಅಧ್ಯಕ್ಷ ಕೆ.ಪಿ. ಸಾದಲಿ ಹಾಜಿ ಅವರು ಮಸೀದಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಂಬಟ್ಟಿ ಮಖಾಂ ಉರೂಸ್‍ಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಬಳಿಕ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಷಂಶುದ್ದೀನ್ ಜ್ಹುಹರಿ ಕಾಜೂರು ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ತಾ. 26 ರಂದು ಅಂಬಟ್ಟಿ ಸ್ವಲಾತ್ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಅಂದು ಸಂಜೆ ನಡೆಯಲಿರುವ ಮತ ಪ್ರವರ್ಚನ ಕಾರ್ಯಕ್ರಮದಲ್ಲಿ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಷಂಶುದ್ದೀನ್ ಜ್ಹುಹರಿ ಕಾಜೂರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ರಾತ್ರಿ ಜರುಗುವ ಸಾಮೂಹಿಕ ದುಅ ಕಾರ್ಯಕ್ರಮದ ನೇತೃತ್ವವನ್ನು ಕೇರಳದ ಆರಳಂನ ಮುಲ್ಲಕೋಯ ತಂಙಳ್ ವಹಿಸಲಿದ್ದಾರೆ.
ತಾ. 27ರಂದು ಮಖಾಂ ಆವರಣದಲ್ಲಿ ಧಿಕ್ರ್ ದುಅ ಕಾರ್ಯಕ್ರಮ ಜರುಗಲಿದೆ. ಧಾರ್ಮಿಕ ವಿದ್ವಾಂಸ ಹಮೀದ್ ಪೈಝಿ ಕಿಳೂರು ಮುಖ್ಯ ಭಾಷಣ ಮಾಡಲಿದ್ದಾರೆ. ತಾ.28 ರಂದು ಮಧ್ಯಾಹ್ನ ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ವಾಗ್ಮಿ, ಹಿರಿಯ ಧಾರ್ಮಿಕ ಪಂಡಿತರಾದ ಡಾ. ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಅಲ್ಲದೆ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ವಿವಿಧ ಮುಖಂಡರು ಮಹಾಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಮೌಲೂದ್ ಪಾರಾಯಣದ ನಂತರ ಸಾಮೂಹಿಕ ಅನ್ನಸಂತರ್ಪಣೆ ಮಾಡಲಾಗುವದು ಎಂದು ಅಂಬಟ್ಟಿ ಮಖಾಂ ಜಮಾಅತ್ತಿನ ಪದಾಧಿಕಾರಿಗಳು ತಿಳಿಸಿದ್ದಾರೆ.