ಕುಶಾಲನಗರ, ಜ. 22: ಕುಶಾಲನಗರ ತಮಿಳ್ ಸಂಘಂ ವತಿಯಿಂದ 3ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಬ್ಬದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಮಿ ಸಾತಪ್ಪನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮುದಾಯ ಬಾಂಧವರು ಸಂಘಟಿತರಾಗಬೇಕಿದೆ. ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಬೇಕು. ತಮ್ಮ ಸಂಸ್ಕøತಿಯ ಅನಾವರಣದೊಂದಿಗೆ ಇತರ ಸಮುದಾಯಗಳ ಜೊತೆ ಸಾಮರಸ್ಯ ಕಾಪಾಡಿಕೊಳ್ಳುವದು ಅತಿಮುಖ್ಯ ಎಂದರು.

ವಾರ್ಷಿಕೋತ್ಸವ ಅಂಗವಾಗಿ ಸ್ಥಳೀಯ ಕೋಣಮಾರಿಯಮ್ಮ ದೇವಾಲಯ ಆವರಣದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಪೊಂಗಲ್ ಸಿದ್ದಪಡಿಸಲಾಯಿತು. ಸಮಾಜದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಡ್ಯಾನ್ಸ್ ಡ್ಯಾನ್ಸ್, ಪುರುಷರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆಗಳು ನಡೆದವು.

ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಪಿ. ಕಾರ್ತೀಶನ್, ಅಖಿಲ ಭಾರತ ತಮಿಳ್ ಸಂಘಂನ ಪ್ರಮುಖ ಕೆ. ಪುಗಳೇಂದಿ, ವಕೀಲ ಎಂ. ಪುನಿದ ದೇವಕುಮಾರ್, ಸಂಘದ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಸೆಂದಿಲ್ ಕುಮಾರ್, ಪೇಚಿಮುತ್ತು, ಧನಂಜಯ್, ಪ್ರಮುಖರಾದ ಶ್ರೀನಿವಾಸನ್, ಶಾಂತ ಮೂರ್ತಿ, ಕರುಣಾನಿಧಿ, ಸೂರ್ಯ ಗಣೇಶ್, ರಘುಪತಿ, ಅಮುದ ಪ್ರಸಾದ್, ಸೆಲ್ವರಾಜ್, ಎಸ್. ಆನಂದ ರಾಮನ್ ಸೇರಿದಂತೆ ಕುಶಾಲನಗರ ಸಂಘದ ಪದಾಧಿಕಾರಿಗಳು ಇದ್ದರು.