ಸೋಮವಾರಪೇಟೆ, ಜ. 22 : ಶತಮಾನದ ಮಹಾಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಸಂಕಷ್ಟಗಳು ಅಷ್ಟಿಷ್ಟಲ್ಲ. ಪ್ರವಾಹ ಸಂದರ್ಭ ಸಮರೋಪಾದಿಯಲ್ಲಿ ನಡೆದ ಪರಿಹಾರ ಕಾರ್ಯ ನಂತರದ ದಿನಗಳಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ. ಸದ್ಯದ ಮಟ್ಟಿಗೆ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಕೃಷಿ ನಷ್ಟಕ್ಕೆ ರೈತರಿಗೆ ಈವರೆಗೆ ಪರಿಹಾರ ಲಭಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಆರಂಭದ ದಿನಗಳಲ್ಲಿ ರೈತರ ಖಾತೆಗೆ ಒಂದಿಷ್ಟು ಪರಿಹಾರ ಹಣ ಬಂದಿದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಪರಿಹಾರ ಸ್ಥಗಿತಗೊಂಡಿತು. ಸರ್ಕಾರದ ಆದೇಶಗಳು ಬದಲಾದಂತೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಇಲ್ಲಿನ ತಾಲೂಕು ಕಚೇರಿಗೆ ಬಂದ ಅರ್ಜಿಗಳನ್ನು ಸಿಬ್ಬಂದಿಗಳು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಿರುವದಷ್ಟೇ ಸದ್ಯದ ಬೆಳವಣಿಗೆ.

ಆನ್‍ಲೈನ್‍ನಲ್ಲಿ ನೋಂದಾವಣೆಯಾದ ಅರ್ಜಿಗಳ ಮುಂದಿನ ಪ್ರಗತಿಯನ್ನು ಸೋಮವಾರಪೇಟೆ, ಜ. 22 : ಶತಮಾನದ ಮಹಾಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಸಂಕಷ್ಟಗಳು ಅಷ್ಟಿಷ್ಟಲ್ಲ. ಪ್ರವಾಹ ಸಂದರ್ಭ ಸಮರೋಪಾದಿಯಲ್ಲಿ ನಡೆದ ಪರಿಹಾರ ಕಾರ್ಯ ನಂತರದ ದಿನಗಳಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ. ಸದ್ಯದ ಮಟ್ಟಿಗೆ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಕೃಷಿ ನಷ್ಟಕ್ಕೆ ರೈತರಿಗೆ ಈವರೆಗೆ ಪರಿಹಾರ ಲಭಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭದ ದಿನಗಳಲ್ಲಿ ರೈತರ ಖಾತೆಗೆ ಒಂದಿಷ್ಟು ಪರಿಹಾರ ಹಣ ಬಂದಿದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಪರಿಹಾರ ಸ್ಥಗಿತಗೊಂಡಿತು. ಸರ್ಕಾರದ ಆದೇಶಗಳು ಬದಲಾದಂತೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಇಲ್ಲಿನ ತಾಲೂಕು ಕಚೇರಿಗೆ ಬಂದ ಅರ್ಜಿಗಳನ್ನು ಸಿಬ್ಬಂದಿಗಳು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಿರುವದಷ್ಟೇ ಸದ್ಯದ ಬೆಳವಣಿಗೆ.

ಆನ್‍ಲೈನ್‍ನಲ್ಲಿ ನೋಂದಾವಣೆಯಾದ ಅರ್ಜಿಗಳ ಮುಂದಿನ ಪ್ರಗತಿಯನ್ನು 45 ಮಂದಿ ಮಕ್ಕಳಿಗೆ 95,850 ರೂಪಾಯಿ ಪರಿಹಾರ ವಿತರಿಸಲಾಗಿದೆ.

31,378 ಅರ್ಜಿ ಸಲ್ಲಿಕೆ: ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ತಾಲೂಕು ಕಚೇರಿಗೆ 31,378 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ತೋಟಗಾರಿಕೆ, ಕೃಷಿ ಮತ್ತು ಕಾಫಿ ಮಂಡಳಿಗೆ ಸಂಬಂಧಿಸಿದ ಅರ್ಜಿಗಳೂ ಅಡಕವಾಗಿದ್ದು, ಒಂದೇ ಸರ್ವೆ ನಂಬರ್‍ನಲ್ಲಿ ಮೂರ್ನಾಲ್ಕು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಅರ್ಜಿಗಳನ್ನು ಸರ್ವೆ ನಂಬರ್ ಮತ್ತು ಬೆಳೆಗಳ ಆಧಾರದ ಪ್ರಕಾರ ಪ್ರತ್ಯೇಕಿಸಲಾಗಿದ್ದು, ಅಂತಿಮವಾಗಿ 21,533 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಕರಿಮೆಣಸು, ಕಿತ್ತಳೆ, ಶುಂಠಿ, ಗೆಣಸು, ಅಡಿಕೆ ಸೇರಿದಂತೆ ಇನ್ನಿತರ ಬೆಳೆ ನಷ್ಟದ ಬಗ್ಗೆ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಅದೇ ಸರ್ವೆ ನಂಬರ್‍ನಲ್ಲಿ ಕಾಫಿಗೂ ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾಗಿ ಅರ್ಜಿಗಳ ಸಂಖ್ಯೆ ಅಧಿಕವಾಗಿದೆ. ಒಟ್ಟಾರೆ ತಾಲೂಕಿನಲ್ಲಿ 21,533 ಮಂದಿ ರೈತರ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದು ತಾಲೂಕು ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಬೆಳೆಗಳಿಗೆ ಪ್ರತ್ಯೇಕವಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಂದುಗೂಡಿಸಿ, ಒಂದೇ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಹೊಸದಾಗಿ 23 ಅರ್ಜಿ: ಭಯಾನಕ ಪ್ರವಾಹದ ನಂತರ ಇತ್ತೀಚೆಗೆ ಬಿಸಿಲು ಕಾಯುತ್ತಿರುವ ಹಿನ್ನೆಲೆ ತಾಲೂಕಿನ ಮಾದಾಪುರ, ಮೂವತ್ತೊಕ್ಲು, ಕಾಂಡನಕೊಲ್ಲಿ ಭಾಗದಲ್ಲಿ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಸಾರ್ವಜನಿಕರು ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನೂತನವಾಗಿ 23 ಅರ್ಜಿಗಳು ಸಲ್ಲಿಕೆಯಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ,

(ಮೊದಲ ಪುಟದಿಂದ) ವರದಿ ನೀಡಿದ ನಂತರ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಅನುಮೋದನೆಗೊಂಡು ಪರಿಹಾರಕ್ಕೆ ಒಳಪಡಬೇಕಿದೆ.

ಈಗಾಗಲೇ ನೋಂದಾವಣೆಗೊಂಡಿರುವ 21,533 ಅರ್ಜಿಗಳು ಆಪರೇಟರ್ ಲಾಗಿನ್ ನಂತರ, ಗ್ರಾಮ ಲೆಕ್ಕಿಗರಿಂದ ಅನುಮೋದನೆಗೊಂಡು, ತಾಲೂಕು ತಹಶೀಲ್ದಾರ್‍ರಿಂದ ಪರಿಶೀಲನೆಗೊಳಪಟ್ಟು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಭೂಮಿ ವಿಭಾಗಕ್ಕೆ ಸಲ್ಲಿಕೆಯಾಗಿದೆ. ಅಲ್ಲಿಂದ ಪರಿಹಾರ ಹಣ ಬಿಡುಗಡೆಯಾಗಬೇಕಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಭೂಮಿ ಸಮಾಲೋಚಕರಾದ ಮಿಲನ್ ಅವರಲ್ಲಿ ‘ಶಕ್ತಿ’ ಮಾಹಿತಿ ಬಯಸಿದ ಸಂದರ್ಭ, ಪ್ರಥಮ ಹಂತದಲ್ಲಿ 1277 ರೈತರಿಗೆ 74 ಲಕ್ಷ ಪರಿಹಾರ ನೀಡಲಾಗಿದ್ದು, ಇದೀಗ 10,500 ರೈತರಿಗೆ 8.50 ಕೋಟಿ ಪರಿಹಾರ ಬಂದಿದೆ. ಈ ಪರಿಹಾರವನ್ನು ಮುಂದಿನ 1 ವಾರದೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವದು. ಉಳಿದ ರೈತರಿಗೆ ಮುಂದಿನ ಒಂದೆರಡು ವಾರದೊಳಗೆ ಪರಿಹಾರ ವಿತರಿಸಲಾಗುವದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ರೈತರು ಅರ್ಜಿ ಸಲ್ಲಿಸುವ ಸಂದರ್ಭ ನೀಡಿರುವ ಆಧಾರ್ ಕಾರ್ಡ್‍ನ ಸಂಖ್ಯೆಯು ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಪರಿಹಾರ ಹಣ ತುಂಬಲಾಗುವದು. ಒಂದು ವೇಳೆ ಅಧಾರ್ ಕಾರ್ಡ್ ನೀಡದ ರೈತರ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವದು ಎಂದು ಮಿಲನ್ ತಿಳಿಸಿದ್ದಾರೆ.

ಇದೀಗ ಅತಿವೃಷ್ಟಿಯಿಂದ ಉಂಟಾದ ಕೃಷಿ ನಷ್ಟಕ್ಕೆ ಮಾತ್ರ ಪರಿಹಾರ ಒದಗಿಸಲಾಗುತ್ತಿದ್ದು, ಭೂಕುಸಿತಗೊಂಡ ಕೃಷಿ ಪ್ರದೇಶ, ಕೃಷಿ ಪ್ರದೇಶದಲ್ಲಿ ಮಣ್ಣು-ಮರಳು ತುಂಬಿ ಆಗಿರುವ ನಷ್ಟದ ಪ್ರಕರಣಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಭೂಕುಸಿತಗೊಂಡು ಭಾರೀ ಪ್ರಮಾಣದಲ್ಲಿ ನಷ್ಟಕ್ಕೊಳಗಾದ ರೈತರಿಗೆ ಮತ್ತು ಕೃಷಿ ಭೂಮಿಯ ಮೇಲೆ ಮಣ್ಣು ತುಂಬಿ ನಷ್ಟ ಅನುಭವಿಸಿದ ಕೃಷಿಕರಿಗೆ ಯಾವ ಮಾನದಂಡದಡಿ ಪರಿಹಾರ ನೀಡಬೇಕು ಎಂಬ ಬಗ್ಗೆ ಇನ್ನೂ ಸರ್ಕಾರ ಮಾರ್ಗಸೂಚಿ ರೂಪಿಸಿಲ್ಲ.

ಕೇವಲ ಮಳೆಯಿಂದ ಉಂಟಾದ ಕೃಷಿ ನಷ್ಟಕ್ಕೆ ಮಾತ್ರ ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಭೂಮಿಯನ್ನೇ ಕಳೆದುಕೊಂಡ ಕೃಷಿಕರಿಗೆ ಯಾವ ಪರಿಹಾರ ಎಂಬ ಪ್ರಶ್ನೆ ಉದ್ಬವವಾಗಿದೆ.

- ವಿಜಯ್ ಹಾನಗಲ್