ವೀರಾಜಪೇಟೆ, ಜ. 21: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸವಾಲುಗಳನ್ನು ಎದುರಿಸಲು ಎನ್ ಎಸ್ ಎಸ್ ಶಿಬಿರ ಸಹಕಾರಿಯಾಗ ಲಿದೆ ಎಂದು ವೀರಾಜಪೇಟೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ: ಕೆ ಕೆ ಬೋಪಯ್ಯ ಹೇಳಿದರು.

ಪೆರುಂಬಾಡಿಯ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಸಭಾಂಗಣ ದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಏರ್ಪಡಿಸಿದ್ದ ಎನ್ ಎಸ್.ಎಸ್. ಶಿಬಿರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಗ್ರಾಮಿಣ ಭಾಗದ ಅನೇಕ ಪ್ರತಿಭೆಗಳಿಗೆ ಆಯ್ದ ವೇದಿಕೆ ಸಿಗದೆ ಎಲೆ ಮರೆ ಕಾಯಿ ಯಂತೆ ಅವಕಾಶದಿಂದ ವಂಚಿತರಾಗಿ ದ್ದಾರೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಎನ್ ಎಸ್.ಎಸ್ ಶಿಬಿರಗಳನ್ನು ಏರ್ಪಡಿಸುವದರಿಂದ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತಾಗು ತ್ತದೆ ಎಂದು ತಿಳಿಸಿದರು.

ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಶಿಬಿರವನ್ನು ಉದ್ಘಾಟಿಸಿ, ವಿದ್ಯಾರ್ಥಿ ಗಳು ಯಾವದೇ ರೀತಿಯ ದುಶ್ಚಟ ಗಳಿಗೆ ದಾಸರಾಗದೆ ಸಮಾಜದ ಪ್ರತಿಷ್ಠೆಯ ಮುಖಿಗಳಾಗಬೇಕು. ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರೆ ಸಾಲದು ಇಲ್ಲಿ ಕಲಿತ ಪ್ರತಿಯೊಂದು ಒಳ್ಳೆಯ ವಿಚಾರ ಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಏಕಲವ್ಯ ವಸತಿ ಶಾಲೆಯ ಕನ್ನಡ ಉಪನ್ಯಾಸಕÀ ಚಂದ್ರನಾಯಕ್ ಮಾತನಾಡಿ ತಮ್ಮಲ್ಲಿರುವ ವಿಕೃತ ಮನಸ್ಸುಗಳನ್ನು ತೆಗೆದು ಹಾಕಿ, ವ್ಯೆಜ್ಞಾನಿಕ ಹಾಗೂ ಸಮಾಜಸೇವೆಯ ಮನೋಭಾವವನ್ನು ಬೆಳೆಸಿಕೊಂಡು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಯಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲ ಹೆಚ್. ಎಸ್. ಯೋಗನರಸಿಂಹಸ್ವಾಮಿ ಹಾಗೂ ಉಪನ್ಯಾಸಕಿ ಕೆ.ಎನ್. ಕಾವೇರಮ್ಮ ಮಾತನಾಡಿದರು. ವೇದಿಕೆಯಲ್ಲಿ ಬಾಳುಗೋಡು ಚಾಮುಂಡಿ ದೇವಸ್ಥಾನದ ಅಧ್ಯಕ್ಷ ಕಬ್ಬಚ್ಚಿರ ಕಾವೇರಪ್ಪ , ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಕೆ. ಕೆ. ಅನಿಲ್ ಉಪಸ್ಥಿತರಿ ದ್ದರು. ರಾಜ್ಯಶಾಸ್ತ್ರದ ಉಪನ್ಯಾಸಕ ರಾದ ಎಮ್ ಎನ್ ವಿನೀತ್ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಬಾಳುಗೋಡು ವಸತಿ ಶಾಲೆಯ ಶಿಕ್ಷಕ ವೃಂದದವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.