ಮಡಿಕೇರಿ, ಜ. 21 : ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಕೂಡಿಗೆಯ ಡಯಟ್ ಮೈದಾನದಲ್ಲಿ ತಾ. 22 ರಂದು (ಇಂದು) ನಡೆಯಬೇಕಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕøತಿಕ ಹಾಗೂ ಕ್ರೀಡಾಕೂಟವನ್ನು ತಾ. 24 ಕ್ಕೆ ಮುಂದೂಡಲಾಗಿದೆ ಎಂದು ನೌಕರರ ಜಿಲ್ಲಾ ಶಾಖೆ ತಿಳಿಸಿದೆ.