ಮಡಿಕೇರಿ, ಜ. 20: ಪ್ರಥಮ ದರ್ಜೆ ಕಾಲೇಜು ಮೂರ್ನಾಡಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಬೆಸೆಂಟ್ ಕಾಲೇಜಿನ ನಿವೃತ ಪ್ರಾಂಶುಪಾಲೆ ಸುಲೋಚನಾ ನಾರಾಯಣ್ ಭಾರತದ ಸಂವಿಧಾನದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಜಾನ್ಸಿ ಅವರು ಯೋಗ ತರಬೇತಿ ನಡೆಸಿಕೊಟ್ಟರೆ, ಮಾಲತಿ ದೇವಯ್ಯ ಕಮ್ಯೂನಿಕೇಟಿವ್ ಇಂಗ್ಲೀಷ್ ತರಗತಿ ನಡೆಸಿಕೊಟ್ಟರು ಕಾಲೇಜಿನ ಪ್ರಾಂಶುಪಾಲ ಪಟ್ಟಡ ಪೂವಣ್ಣ ಇದ್ದರು.