ಸೋಮವಾರಪೇಟೆ,ಜ.20: ರೈತರ ಜೀವಾಳ ಜಾನುವಾರು ಗಳಾಗಿದ್ದು, ಅವುಗಳ ಅಭಿವೃದ್ಧಿ ಯೊಂದಿಗೆ ರೈತರ ಶ್ರೇಯೋಭಿವೃದ್ಧಿ ಗಾಗಿ ಸರಕಾರವು ಸಹಕಾರ ಸಂಘಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳು ವಂತಾಗಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಭಿಪ್ರಾಯಿಸಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಬೇಳೂರು ಬಾಣೆ ಹಾಲಿನ ಡೈರಿ ಸಮೀಪ ಆಯೋಜಿಸಿದ್ದ ಉಚಿತ ಪಶು ತಪಾಸಣಾ ಶಿಬಿರ ಹಾಗೂ ಆರೋಗ್ಯವಂತ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಹೈನುಗಾರಿಕೆಯಲ್ಲೂ ನೂತನ ತಂತ್ರಜ್ಞಾನ ವ್ಯವಸ್ಥೆಗಳಿದ್ದು, ಅವುಗಳನ್ನು ಬಳಸಿಕೊಂಡು ಕಡಿಮೆ ಆದಾಯದಲ್ಲಿ ಹೆಚ್ಚು ಲಾಭ ಗಳಿಸುವತ್ತ ರೈತರು ಗಮನ ಹರಿಸಬೇಕು ಎಂದರು. ಬೇಳೂರಿನ ನಿವಾಸಿಯಾಗಿದ್ದ ಬಿ.ಬಿ. ಸೋಮಶೇಖರ್‍ರವರ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸಂಪನ್ಮೂಲ ವ್ಯಕ್ತಿಯಾಗಿ ಪಶುವೈದ್ಯ ಇಲಾಖೆಯ ಜಿಲ್ಲಾ ಪ್ರಬಾರ ಉಪನಿರ್ದೇಶಕ ಡಾ. ಎ.ಬಿ. ತಮ್ಮಯ್ಯ, ಕೂಡಿಗೆ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಅಧಿಕಾರಿ ಸಲಾವುದ್ದೀನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೇಳೂರಿನ ಕಾಫಿ ಬೆಳೆಗಾರರಾದ ಬಿ.ಎಸ್. ಶಿವಶಂಕರ್‍ರವರನ್ನು ಹಾಗೂ ಜಾನುವಾರುಗಳ ಸೇವೆಯಲ್ಲಿ ಕಳೆದ 10 ವರ್ಷಗಳಿಂದ ಬೇಳೂರು ವ್ಯಾಪ್ತಿಯಲ್ಲಿ ತೊಡಗಿಸಿಕೊಂಡಿರುವ ಪಶುವೈದ್ಯ ಇಲಾಖೆಯ ಡಿ. ಗ್ರೂಪ್ ನೌಕರ ಸುರೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಉತ್ತಮ ರಾಸುಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಬೇಳೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಪ್ರಾ.ಕೃ.ಪ. ಸಹಕಾರ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ಮಾಜಿ ಅಧ್ಯಕ್ಷ ಬಿ.ಎಸ್. ಅನಂತ ರಾಮ್, ಮಾಜಿ ನಿರ್ದೇಶಕರು ಗಳಾದ ದೇವಯ್ಯ, ಕುಶಾಲಪ್ಪ, ಹಾಲಿ ನಿರ್ದೇಶಕರು ಗಳಾದ ಕೆ.ಎಸ್. ದಾಸಪ್ಪ, ಹೆಚ್.ಕೆ. ಮಾದಪ್ಪ, ಲಕ್ಷ್ಮಿಕಾಂತ್, ಸೋಮಶೇಖರ್(ಚೋಮಿ) ಸುಮಾ ಸುದೀಪ್, ರೂಪಾ ಸತೀಶ್, ಬಿ.ಎಂ. ಸುರೇಶ್, ಅರೆಯೂರು ಸೋಮಯ್ಯ, ಸಂಘದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ, ಸಿಬ್ಬಂದಿಗಳಾದ ಜಿ.ಜಿ. ನವೀನ್, ಎಸ್.ಎಂ. ಕುಮಾರ್, ಮಂಜುಳಾ ಹಾಗೂ ಇಫ್ಕೋ ಅಧಿಕಾರಿ ರಫೀಕ್ ಉಪಸ್ಥಿತರಿದ್ದರು.